ಇದು ‘ಕಿರಿಯ’ ಸಾಧನೆ

0
294

ಸಿಇಒ ಬ್ರದರ್ಸ್
ಸಣ್ಣ ವಯಸ್ಸಲ್ಲೇ ಚಾರ್ಮ್ ಮೂಡಿಸಿರೋ ಮಲ್ಟಿ ಟ್ಯಾಲೆಂಟೆಡ್ ಪೀಪಲ್ಸ್​ನ ನಾವು ಬೇಕಾದಷ್ಟು ನೋಡಿದ್ದೀವಿ. ಆದ್ರೆ ಇವ್ರು ಮಾತ್ರ ಎಕ್ಸ್ಟ್ರಾರ್ಡಿನರಿ. ಬ್ರೈನ್ ಗೇಮ್ ಆಡಿಸೋ ಚಾಣಾಕ್ಷರು. ಮೀಸೆ ಚಿಗುರೋ ಮುನ್ನವೇ ನಂಬಲಸಾಧ್ಯವಾದ ಸಾಧನೆ ಮಾಡಿ ಸಂಚಲನವನ್ನ ಸೃಷ್ಟಿಸಿದ್ದಾರೆ. ಸ್ಮಾರ್ಟ್ ಲುಕ್​ಗೆ ಸೂಟು ಬೂಟು…ಸ್ಟೇಜ್ ಮೇಲೆ ನಾನ್​ಸ್ಟಾಪ್ ಸ್ಪೀಚು…ಮಕ್ಳು ಎಷ್ಟೊಂದು ಮುದ್ದಾಗಿದ್ದಾರೆ, ಎಷ್ಟ್ ನೀಟಾಗಿ ಡ್ರೆಸ್ ಮಾಡ್ಕೊಂಡಿದಾರೆ, ಎಷ್ಟೊಂದು ಚೆನ್ನಾಗಿ ಸ್ಪೀಚ್ ಮಾಡ್ತಾರೆ ಅಂತನಿಸತ್ತೆ ಅಲ್ವಾ.. ಆದ್ರೆ ಇವ್ರು ಅಷ್ಟೇ ಟ್ಯಾಲೆಂಟೆಡ್..
 
ಅಷ್ಟಕ್ಕೂ ಇವ್ರು ಬ್ರದರ್ಸ್.. ಸಾವಿರಾರು ಜನ್ರ ಎದುರು ನಿಂತು ಇವ್ರು ಮಾತನಾಡೋಕೆ ಶುರು ಮಾಡಿದ್ರೆ ಪ್ರತಿಯೊಂದು ಪದವನ್ನ ತಪ್ಪದೇ ಕೇಳ್ತಾರೆ. ಇವರ ಸ್ಪೀಚ್​ಗೆ ಅಷ್ಟೊಂದು ಮಹತ್ವವಿದೆ. ಕಿರಿಯ ವಯಸ್ಸಲ್ಲೇ ಇವರು ದೊಡ್ಡ ಸಾಧಕರು.
 
ceo brother_vaarte
ಮೊಬೈಲ್​ನಲ್ಲಿ ಆಟವಾಡೊಲ್ಲ, ಆಡಿಸ್ತಾರೆ..!
ಪುಟ್ಟ ಪೋರರ ಕಥೆ ನಿಜಕ್ಕೂ ಅಚ್ಚರಿ ತರಿಸುತ್ತೆ. ಚೆನ್ನೈನ ಪ್ರತಿಭಾವಂತ ಮಕ್ಕಳದು ಮೊಬೈಲ್ ಗೇಮ್ ಆಡ್ತಾ ಕೂರೋ ವಯಸ್ಸು. ಆದ್ರೆ ಇವರು ಗೇಮ್ ಆಡೋರಲ್ಲ, ಬದಲಾಗಿ ಆಡಿಸೋರು. ಯಾವ್ಥರನಪ್ಪಾ ಅಂತ ತಲೇಲಿ ಹುಳ ಬಿಟ್ಕೋಬೇಡಿ, ಆ್ಯಪ್​ಗಳನ್ನ ರಚನೆ ಮಾಡುವಷ್ಟು ಕ್ರಿಯೇಟಿವ್ ಮೈಂಡ್ ಇವರದ್ದು. ಬಾಲಮಂಗಳ ಓದುವ ವಯಸ್ಸಲ್ಲಿ ತಂತ್ರಜ್ಞಾನ ಲೋಕವನ್ನ ಅರೆದು ಕುಡಿತಿದ್ದಾರೆ.
 
 
ಸ್ವಂತ ಕಂಪನಿ ನಿರ್ಮಿಸಿದ್ರು ಪೋರರು
ಮಕ್ಕಳು ಎಷ್ಟರಮಟ್ಟಿಗೆ ಸಾಧನೆ ಮಾಡೋಕೆ ಸಾಧ್ಯಾರೀ? ಅನ್ನೋ ಪ್ರಶ್ನೆಗೆ ತಕ್ಕ ಉತ್ತರವನ್ನ ನೀಡಿದ್ದಾರೆ ಈ ಮಕ್ಕಳು. ಆ್ಯಪ್​ಗಳನ್ನ ರಚಿಸೋಕೆ 2011ರಲ್ಲಿ ತಮ್ಮದೇ ಕಂಪನಿಯನ್ನ ನಿರ್ಮಿಸಿದ್ದಾರೆ. ಇವ್ರ ಗೋ ಡೈಮೆನ್ಷನ್ಸ್ ಅನ್ನೋ ಹೆಸರಿನ ಕಂಪನಿಗೆ ಒಬ್ಬ ಅಧ್ಯಕ್ಷ ಇನ್ನೊಬ್ಬ ಸಿಇಒ. ಭಾರತದ ಅತ್ಯಂತ ಕಿರಿವಯಸ್ಸಿನ ವಾಣಿಜ್ಯೋದ್ಯಮಿಗಳಾದ ಹೆಗ್ಗಳಿಕೆ ಇವರದ್ದು. ಮನೆಯ ರೂಂನೊಳಗೆ ಕುಳಿತು ಕ್ರಿಯೇಟ್ ಮಾಡಿದ ಕಂಪನಿ ಈಗ ಭಾರೀ ಪ್ರಸಿದ್ಧಿಯನ್ನ ಪಡ್ಕೊಂಡಿದೆ.
ಒಬ್ಬ ಶ್ರವಣ ಕುಮಾರನ್. ಇನ್ನೊಬ್ಬ ಸಂಜಯ್ ಕುಮಾರನ್… ಶ್ರವಣನಿಗೆ 15 ವರ್ಷ, ಸಂಜಯ್​ಗೆ 14 ವರ್ಷ. ಇವ್ರ ಕಂಪನಿಗೆ ಶ್ರವಣ್ ಅಧ್ಯಕ್ಷ..ಸಂಜಯ್ ಸಿಇಒ.. ಇಷ್ಟು ಸಣ್ಣ ಮಕ್ಕಳಿಂದ ಇವೆಲ್ಲಾ ಸಾಧ್ಯವಾಯ್ತಾ ಅಂತ ಅಚ್ಚರಿ ಪಡುವಂತೆ ಮಾಡಿದೆ ಇವ್ರ ಸಾಧನೆ. ಸ್ಕೂಲಿಗೆ ಹೋಗೋ ಸಮಯದಲ್ಲೇ ತಂತ್ರಜ್ಞಾನದ ಲೋಕದೊಳಗೆ ಕಾಲಿಟ್ಬಿಟ್ಟಿದ್ದಾರೆ.
ceo brother_vaarte2
 
‘ಕ್ಯಾಚ್ ಮಿ ಕಾಪ್’ ಮೆಚ್ಚಿದ ಕಲಾಂ
ಕಂಪನಿ ಸ್ಟಾರ್ಟ್ ಆದ ಎರಡೇ ವರ್ಷದಲ್ಲಿ ಈ ಬಾಲಕರು 11 ಆ್ಯಪ್​ಗಳನ್ನ ಅಭಿವೃದ್ಧಿಪಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿಬಿಟ್ಟಿದ್ರು. ಇವ್ರ ಕ್ರಿಯೇಟಿವಿಟಿನ ಆಪಲ್ ಸ್ಟೋರ್ ಹಾಗೂ ಎಂಡ್ರಾಯ್ಡ್ ಪ್ಲೇ ಮೊಬೈಲ್ ಅಪ್ಲಿಕೇಶನ್ ತಾಣದಲ್ಲಿ ನೋಡೋಕೆ ಸಾಧ್ಯ. ಆಪಲ್ ಆಪ್ ಸ್ಟೋರ್​ನಲ್ಲಿರೋ ಇವ್ರ ಮೊದಲ ಗೇಮ್ ಆಪ್ ಕ್ಯಾಚ್ ಮಿ ಕಾಪ್…ಸೂಪರ್ ಗೇಮ್ ಇದು.. ಜೈಲಿಂದ ತಪ್ಪಿಸ್ಕೊಂಡ ಖೈದಿಯನ್ನ ಪೊಲೀಸ್ ಶೋಧ ನಡೆಸೋ ಗೇಮ್…ಮರುಭೂಮಿ, ಬೀಚ್ ಹುಲ್ಲುಗಾವಲು ಮುಂತಾದೆಡೆ ಬೆನ್ನಟ್ಟಲಾಗತ್ತೆ. ಈ ಮಕ್ಕಳ ಶಾಲೆಗೆ ಬಂದಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಸಹೋದರರ ಗೇಮ್ ಆಪ್ ನೋಡಿ ಬಹಳಾನೇ ಇಷ್ಟಪಟ್ಟಿದ್ರು. ಅದು ಮರೆಯಲಾಗದ ಘಳಿಗೆ ಅಂತ ಇವ್ರು ಹೇಳಿಕೊಳ್ತಾರೆ.
 
 
ಮಕ್ಕಳ ಬಗ್ಗೆ ಶಿಕ್ಷಕರು ಹೇಳಿದ್ದೇನು ಗೊತ್ತಾ?
3 ವರ್ಷದ ಹಿಂದೆ ಬೆಂಗಳೂರಲ್ಲಿ ಸಿಸ್ಟಂ ಅಪ್ಲಿಕೇಶನ್ ಹಾಗೂ ಪ್ರೊಡಕ್ಟ್ ಕಾರ್ಯಕ್ರಮವನ್ನ ಆಯೋಜಿಸಿದ್ರು. 5500 ಮಂದಿಯ ಎದುರುಗಡೆ ನಿಂತು ಬ್ಯುಸಿನೆಸ್ ಶುರು ಮಾಡೋದೇಗೆ? ಸಕ್ಸಸ್ ಕಾಣೋದೇಗೆ ಎನ್ನುವ ಬಗ್ಗೆ ಈ ಬಾಲಕರು ಮಾತನಾಡಿದ್ರು. ಒಳ್ಳೆಯ ಐಡಿಯಾ, ಆತ್ಮವಿಶ್ವಾಸ, ಬ್ಯುಸಿನೆಸ್ ನಾಲೆಡ್ಜ್ ಇರಲೇಬೇಕು ಅಂತ ಬ್ಯುಸಿನೆಸ್ ಬಗ್ಗೆ ಹಿರಿಯರು ಹೇಳೋ ಸ್ಟೈಲ್​ನಲ್ಲೇ ಈ ಮಕ್ಕಳು ಸ್ಪೀಚ್ ಮಾಡಿದಾಗ ನೆರೆದಿದ್ದವರೆಲ್ಲಾ ಮಂತ್ರಮುಗ್ಧರಾಗಿ ಕುಳಿತುಬಿಟ್ಟಿದ್ರು.
ಚೆನ್ನೈನಲ್ಲಿರುವ ಇವರ ಮನೆಯ ಕೊಠಡಿ ಡಿಜಿಟಲ್ ಲಾಂಜ್ ಆಗ್ಬಿಟ್ಟಿದೆ. ಎಲ್ಲಿ ನೋಡಿದ್ರೂ ಆಪಲ್ ಮ್ಯಾಕ್ ಕಂಪ್ಯೂಟರ್​ಗಳು.. ಐಪ್ಯಾಡ್​ಗಳು, ಸ್ಯಾಮ್​ಸಂಗ್ ಗ್ಯಾಲಕ್ಸಿ ನೋಟ್​ಗಳು…. ಶಾಲೆಯ ಹೋಂ ವರ್ಕ್ ಮುಗಿಸಿ ಉಳಿದ ಸಮಯವನ್ನ ಕೋಡಿಂಗ್, ಪ್ರಾಯೋಗಿಕ ಆ್ಯಪ್​ಗಳ ಡೀಬಗಿಂಗ್​ಗೆ ವಿನಿಯೋಗಿಸ್ತಾರೆ.
ಇವರ ತಾಯಿ ಜ್ಯೋತಿಲಕ್ಷ್ಮೀ..ಪತ್ರಕರ್ತೆಯಾಗಿ ಕೆಲಸ ಮಾಡ್ತಿರೋದು. ಮಕ್ಕಳ ಚಟುವಟಿಕೆ ಬಗ್ಗೆ ಕೇವಲ ಒಂದು ಮಾತಲ್ಲಿ ಹೇಳಿಬಿಡ್ತಾರೆ. ಈ ಮಕ್ಕಳು ಶಾಲೆಗೆ ಹೋಗೋದ್ಕಿಂತ ಮನೆಯಲ್ಲೇ ಇದ್ರೆ ಹೆಚ್ಚಿನ ಸಾಧನೆ ಮಾಡ್ತಾರೆ ಅಂತ ಶಾಲಾ ಟೀಚರ್ಸ್ ತನ್ನ ಬಳಿ ಹೇಳ್ತಿರ್ತಾರೆ ಅಂತ ಮಕ್ಕಳ ಪ್ರಬುದ್ಧತೆ, ಟ್ಯಾಲೆಂಟ್ ಬಗ್ಗೆ ಪ್ರತಿಕ್ರಿಯೆ ನೀಡ್ತಾರೆ.
 
 
ಬಳಕೆದಾರರಲ್ಲಿ ಹಿಟ್ ಆಯ್ತು ಆಕ್ಷನ್ ಗೇಮ್..!
ಗೇಮ್ ಆಪ್​ಗಳನ್ನ ಭಿನ್ನ ರೀತಿಯಲ್ಲಿ ಅಭಿವೃದ್ಧಿಪಡಿಸೋ ಸಹೋದರರು ಕೆಲಕಾಲದ ಹಿಂದೆ ಆಕ್ಷನ್ ಗೇಮೊಂದ್ರನ್ನ ಅಭಿವೃದ್ಧಿಪಡಿಸಿದ್ರು. ಇದ್ರ ಹೆಸ್ರು ಎಕ್ಸ್ಟ್ರೀಮ್ ಇಪಾಸಿಬಲ್ 5.. ರೋಮಾಂಚನ ಅನುಭವ ನೀಡ್ತಿದ್ದ ಈ ಎನ್ಡ್ರಾಯ್ಡ್ ಗೇಮ್ ಬಳಕೆದಾರರಲ್ಲಿ ಹಿಟ್ ಆಗಿತ್ತು. ಮೊದಲ ಆ್ಯಪ್ ಬಿಡುಗಡೆ ಮಾಡೋಕು ಮುಂಚೆ ಸುಮಾರು 150 ಆ್ಯಪ್​ಗಳನ್ನ ರೂಪಿಸಿಬಿಟ್ಟಿದ್ರು. ಆಪಲ್ ಕಂಪನಿಗೆ ನೀಡಿದ ಒಂದೇ ವಾರದಲ್ಲಿ ಆ್ಯಪ್ ಲಾಂಚ್ ಆಗ್ಬಿಟ್ಟಿತ್ತು. ಅಲ್ಫಬೆಟ್ ಬೋರ್ಡ್ ಅನ್ನೋ ಆ್ಯಪ್​ಗೆ 5ರ ರೇಟಿಂಗ್ ಕೂಡಾ ಸಿಕ್ಕಿದೆ.ಎಲ್ಲಾ ಸಾಧನೆಗಳಿಗೂ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರೇ ಪ್ರೇರಣಾ ಶಕ್ತಿ ಅಂತ ಹೇಳ್ತಾರೆ ಈ ಸೂಪರ್ ಬ್ರದರ್ಸ್.
 
 
 
‘ಸಿಇಒ’ ಮಕ್ಕಳ ಭವಿಷ್ಯದ ಹಾದಿ….
3ನೇ ಕ್ಲಾಸ್​ನಲ್ಲಿರುವಾಗ್ಲೇ ಕ್ಯೂಬೇಸಿಕ್ ಎಂಬ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜನ್ನ ಕಲಿತುಬಿಟ್ಟಿದ್ರು. ಬುಕ್ಸ್ ಹಾಗೂ ಇಂಟರ್​ನೆಟ್​ಗಳಲ್ಲಿ ಮಾಹಿತಿಯನ್ನ ಹುಡುಕಿ ಜಾವಾ ಕೋಡಿಂಗ್ ಅಧ್ಯಯನ ಮಾಡಿದ್ರು. ಕೇವಲ ತಂತ್ರಜ್ಞಾನಗಳಷ್ಟೇ ಅಲ್ಲ, ಇತರ ವಿಚಾರಗಳಲ್ಲಿಯೂ ಬಹಳ ಆಸಕ್ತಿ ಹೊಂದಿದ್ದಾರೆ. ಗಿಟಾರ್ ವಾದನ ಇವರ ಫೆವರೇಟ್.. ಹಾಗೆಯೇ ಕ್ರಿಕೆಟ್ ಅಂದ್ರೆ ಇನ್ನಿಲ್ಲದ ಪ್ರೀತಿ. ಮಹೇಂದ್ರ ಸಿಂಗ್ ಧೋನಿ ಅವರ ಆಕ್ರಮಣಕಾರಿ ಆಟ ಇವರಿಗೆ ಅಚ್ಚುಮೆಚ್ಚು. ಈ ಮಕ್ಕಳಿಗೆ ಇನ್ನೂ 18 ವರ್ಷ ಆಗಿಲ್ಲ. ಹಾಗಾಗಿ ಇವರ ಕಂಪನಿಯನ್ನ ತಂದೆಯ ಹೆಸರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಭಾರತದಲ್ಲಿ 50ಶೇಕಡಾ ಬಳಕೆದಾರರು ತಮ್ಮ ಆ್ಯಪ್ ಬಳಸಿದ್ರೆ ಮೊದಲ ಪೇಯ್ಡ್ ಆ್ಯಪ್ ಬಿಡುಗಡೆ ಮಾಡೋ ಆಸೆಯನ್ನ ಹೊಂದಿದ್ದಾರೆ.
 
ಸಾಧಿಸಿಯಾಗಿದೆ, ಸಾಧಿಸುವುದಿದೆ ಇದು ಚೆನ್ನೈ ಸಹೋದರರ ಪಟ್ಟು. ಅತಿ ಕಿರಿಯ ವಯಸ್ಸಿನಲ್ಲೇ ಸ್ವಂತ ಕಂಪನಿ ತಯಾರಿಸಿ ಉದ್ಯಮ ವಲಯದಲ್ಲಿ ಸದ್ದು ಮಾಡ್ತಿರುವ ಈ ಬಾಲಕರ ಕ್ರಿಯೆಟಿವಿಟಿಗೆ ಹಾಗೂ ಸಾಧನೆಗೆ ಸಲಾಂ ಹೇಳಲೇಬೇಕು.
-ವಿನಾಯಕ ಭಟ್, ಬ್ರಹ್ಮೂರು

LEAVE A REPLY

Please enter your comment!
Please enter your name here