ಇದು ಉಪನಯನವೂ ಹೌದು, ವನ ನಯನವೂ ಹೌದು..!

0
455

ದಿನೇಶ್ ಹೊಳ್ಳ, ಮಂಗಳೂರು.

ಇದೊಂದು ಹೊಸ ಪ್ರಯೋಗ ಮತ್ತು ಪರಿಸರಕ್ಕೆ ಪೂರಕವಾದಂತಹ ಆಮಂತ್ರಣ ಪತ್ರಿಕೆ. ದಿನ ನಿತ್ಯ ನಾವು ಉಪಯೋಗಿಸಿದ ಅಸಂಖ್ಯಾತ ವಸ್ತು ಗಳು ಎಲ್ಲೆಂದರಲ್ಲಿ ಚೆಲ್ಲಾಡಿ ಪರಿಸರಕ್ಕೆ ಮಾರಕವಾಗಿರುವ ಈ ಸಂದರ್ಭದಲ್ಲಿ ಪ್ರಕೃತಿಗೆ ಯಾವುದೇ ರಗಳೆ ನೀಡದ ಹಾಗೂ ಕರಗಿ ಗಿಡ ಆಗುವ ಈ ಉಪನಯನದ ಆಮಂತ್ರಣ ಪತ್ರಿಕೆಯನ್ನು ಮಾಡಿಸಿದವರು ಕುಂದಾಪುರದ ಅಕ್ಷತಾ ಮತ್ತು ಗಿರೀಶ್ ಐತಾಳ ದಂಪತಿ. ಇವರು ತಮ್ಮ ಪುತ್ರ ಆರುಷ್ ನ ಬೃಹ್ಮೋಪ ದೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಈ ರೀತಿಯ ಬೀಜ ಮಿಶ್ರಿತ ಕಾರ್ಡ್ ಹಂಚಿ ಮನೆಯ ಒಂದು ಶುಭ ಸಂಭ್ರಮದ ಮೂಲಕ ಪರಿಸರಕ್ಕೆ ಪೂರಕವಾದ ಮತ್ತು ನೆಮ್ಮದಿಯ ಕೊಡುಗೆ ನೀಡಿ ಪ್ರಕೃತಿ ತಾಯಿಯ ಆಶೀರ್ವಾದ ಪಡೆದಿರುತ್ತಾರೆ. ಈ ಆಮಂತ್ರಣ ಪತ್ರಿಕೆಯ ಹಿಂದೆ ಬೀಜಗಳಿದ್ದು ಈ ಕಾರ್ಡನ್ನು ಎಲ್ಲಾದರೂ ಮನೆಯ ಅಂಗಳದಲ್ಲಿ ಅಥವಾ ತೋಟ, ಗಾರ್ಡನ್ ನಲ್ಲಿ ಇಟ್ಟು ನೀರೆರೆದು ಪೋಷಿಸಿದರೆ ಒಂದಷ್ಟು ಗಿಡಗಳು ಬೆಳೆದು ನೆಲದ ಹಸಿರು ಹೊದಿಕೆ ಮತ್ತು ಅಂತರ್ಜಲ ಇಂಗಲು ಸಹಕಾರಿ ಆಗಬಹುದು. ಮನೆಯ ತ್ಯಾಜ್ಯಗಳು ಬೀದಿ ತುಂಬಿ ಮಾಲಿನ್ಯ ವಾಗುವುದಕ್ಕಿಂತ ಉಪಯೋಗಿಸಿದ ಒಂದು ಕಾರ್ಡು ತ್ಯಾಜ್ಯ ಆಗದೇ ಪೂಜ್ಯ ಭಾವನೆ ಯ ಗಿಡ ಆಗುವುದಾದರೆ ಇದು ವೃಕ್ಷ ರಕ್ಷಣೆಗೆ ಒಂದು ಅಮೂಲ್ಯ ಕೊಡುಗೆ ಆಗುತ್ತದೆ. ಇಂತಹ ಒಂದು ಹೊಸ ಪರಿಕಲ್ಪನೆಯ,ಈ ನೆಲದ ಹಸಿರು ಹೊದಿಕೆ ಆಗಲಿರುವ ಆಮಂತ್ರಣ ಪತ್ರಿಕೆ ಹಂಚಿರುವ ಅಕ್ಷತಾ, ಗಿರೀಶ್ ಐತಾಳ ದಂಪತಿಗೆ ಅಭಿನಂದನೆಗಳು…ಈ ರೀತಿಯ ಆಮಂತ್ರಣ ಪತ್ರಿಕೆ ಬೇಕಾದವರು ಪ್ರಕೃತಿ ಮಿತ್ರ ನಿತಿನ್ ವಾಸ್ ( 9108754870 ) ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here