ಇತಿಹಾಸ ದಾಖಲಿಸಿದ ಇಸ್ರೋ

0
246

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮೊದಲ ಸ್ವದೇಶಿ ನಿರ್ಮಿತ ಆರ್ ಎಲ್ ವಿ ಯಶಸ್ವೀ ಪ್ರಯೋಗ
ಇದೇ ಮೊದಲ ಭಾರಿಗೆ ಸ್ವದೇಶಿ ನಿರ್ವಿುತ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರಿಂದ ದೇಶದ ಬಾಹ್ಯಾಕಾಶ ತಂತ್ರಜ್ಞಾನ ಇತಿಹಾಸದಲ್ಲೇ ದಾಖಲೆಗೆ ಇಸ್ರೋ ಸಾಕ್ಷಿಯಾಗಿದೆ.
 
 
 
ಮರುಬಳಕೆ ಮಾಡಬಹುದಾದ ಮೊದಲ ದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹಕ(ಆರ್ ಎಲ್ ವಿ)ಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ.
 
 
 
ಇಸ್ರೋ ಅಭಿವೃದ್ಧಿಪಡಿಸಿರುವ ಆರ್​ಎಲ್ ವಿ-ಟಿಡಿ ನೌಕೆ ಸುಮಾರು 1.7 ಟನ್ ತೂಕವಿದೆ. ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿಯೇ ಪೂರ್ವಭಾವಿ ಪರೀಕ್ಷೆ ನಡೆಸಿ, ಅದರ ಕಾರ್ಯಕ್ಷಮತೆ ಮತ್ತು ವಿಮಾನ ನಿಯಂತ್ರಣ ಪರೀಕ್ಷೆಯನ್ನು ನಡೆಸಲಾಗಿದೆ. ಮಾನವರಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಸಹಕಾರಿ ಎಂದು ವಿಜ್ಞಾನಿಗಳು ವಿವರಿಸಿದ್ದು, ಇದು ಅಮೆರಿಕದ ನೌಕೆಗಿಂತ ಆರು ಪಟ್ಟು ಚಿಕ್ಕದಾಗಿದೆ.
 
 
2011ರಲ್ಲಿ ಅಮೆರಿಕದ ನಾಸಾ ಮರುಬಳಕೆ ಮಾಡಬಹುದಾದ ಉಪಗ್ರಹ ಉಡಾವಣಾ ವಾಹಕದ ಯೋಜನೆಯನ್ನು ಕೈಬಿಟ್ಟಿರುವುದರಿಂದ ಈ ಪರೀಕ್ಷೆ ಮತ್ತಷ್ಟು ಮಹತ್ವ ಪಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here