ಇತಿಹಾಸ ಅಳಿಸಿ ಹಾಕ್ತಾರಾ..?

0
363

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ಮುಂಬೈನ ಹಾಜಿ ಆಲಿ ದರ್ಗಾ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ.
 
 
 
ತನ್ನ ಬೆಂಬಲಿಗರ ಜೊತೆ ತೃಪ್ತಿ ದರ್ಗಾ ಪ್ರವೇಶಿಸಲಿದ್ದಾರೆ. ಏಪ್ರಿಲ್‌ 28ರಂದು ಮುಂಬೈನ ಹಾಜಿ ಆಲಿ ದರ್ಗಾ ಪ್ರವೇಶಿಸಿ ಸಮಾಧಿ ಮುಟ್ಟಿ ಪ್ರಾರ್ಥನೆ ಸಲ್ಲಿಸುವುದಾಗಿ ಲಿಂಗ ಸಮಾನತೆ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಈಗಾಗಲೇ ಹೇಳಿದ್ದಾರೆ. ಕಳೆದ ಶುಕ್ರವಾರವಷ್ಟೇ ತ್ರಯಂಬಕೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದರು.
 
 
ಈ ಹಿನ್ನೆಲೆಯಲ್ಲಿ ದರ್ಗಾ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ಮಾಡಲಾಗಿದೆ. ಆದರೆ ದರ್ಗಾ ಪ್ರವೇಶಕ್ಕೆ ಎಐಎಂಐಎಂ ವಿರೋಧ ವ್ಯಕ್ತಪಡಿಸಿದೆ. ದರ್ಗಾದ ಶಾಂತಿ ಕದಡದಂತೆ ತೃಪ್ತಿಗೆ ತಾಕೀತು ಮಾಡಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here