ಇಟಲಿಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ

0
295

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಬುಧವಾರ ಮಧ್ಯ ಇಟಲಿಯಲ್ಲಿ ದೊಡ್ಡ ಪ್ರಮಾಣದ ಸರಣಿ ಭೂಕಂಪವಾಗಿದ್ದು, ಕಳೆದ ವರ್ಷ ಸರಣಿ ಭೂಕಂಪ ಸಂಭವಿಸಿದ ಪ್ರದೇಶದಲ್ಲೇ ಈ ಬಾರಿಯೂ ಮೂರು ಬಾರಿ ಭೂಮಿ ಕಂಪಿಸಿದೆ.
 
 
 
ನಿನ್ನೆ ಬೆಳಗ್ಗೆ 10.25ಕ್ಕೆ ಮೊದಲ ಬಾರಿಗೆ 5.4 ತೀವ್ರತೆಯ ಕಂಪನವಾಗಿದ್ದು, ಎರಡನೇ ಬಾರಿ 5.7 ಹಾಗೂ ಮೂರನೇ 5.3 ತೀವ್ರತೆಯ ಭೂಕಂಪನವಾಗಿದೆ. ತಕ್ಷಣಕ್ಕೆ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಬ್ ವೇಗಳನ್ನು ಬಂದ್ ಮಾಡಲಾಗಿದೆ.
 
 
ಭೂಕಂಪನದ ಕೇಂದ್ರ ಬಿಂದು ಇಟಲಿಯ ರಾಜಧಾನಿ ರೋಮ್ಂದ ಸುಮಾರು 100 ಕಿ.ಮೀ. ದೂರವಿರುವ ಅಮಾಟ್ರಿಕೆ ಎಂಬ ಪಟ್ಟಣದ ದಕ್ಷಿಣದಲ್ಲಿ ಪತ್ತೆಯಾಗಿದ್ದು, ಕಳೆದ ವರ್ಷ ಸಹ ಇದೇ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು.
ಅಬ್ರುಜೋ, ಜಾಜಿಯೋ, ಮಾರ್ಚೆ ಪ್ರದೇಶಗಳಲ್ಲಿ ಹಾಗೂ ರೋಮ್ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

LEAVE A REPLY

Please enter your comment!
Please enter your name here