ಇಂದೇ ಬಜೆಟ್ ಮಂಡಿಸಲು ನಿರ್ಧಾರ

0
240

ನವದೆಹಲಿ ಪ್ರತಿನಿಧಿ ವರದಿ
ಇಂದೇ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಬಜೆಟ್ ಮುಂದೂಡದಿರಲು ನಿರ್ಧರಿಸಲಾಗಿದೆ. ನಿಗದಿಯಂತೆ ಇಂದು ಬೆಳಗ್ಗೆ 11 ಗಂಟೆ ಲೋಕಸಭೆ ಕಲಾಪ ನಡೆಯಲಿದೆ. ಆಗಲಿದ ಸಂಸದ ಇ.ಅಹಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಗಲಿದೆ.
 
 
ಆದರೆ ಬಜೆಟ್ ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ರಾಜ್ಯದ ಸಂಸದರ ಒತ್ತಾಯವೂ ಬಂದಿದೆ ಎಂದು ಸಚಿವಾಲಯ ಮೂಲಗಳು ತಿಳಿಸಿದೆ.
 
 
ಕಾಂಗ್ರೆಸ್ ಒತ್ತಾಯ:
ಬಜೆಟ್ ಮಂಡನೆ ಮುಂದೂಡುವಂತೆ ಕಾಂಗ್ರೆಸ್ ಒತ್ತಾಯ ಮಾಡಿದೆ.’ಕೇಂದ್ರ ಸರ್ಕಾರ ಬಜೆಟ್ ಮಂಡನೆ 1 ದಿನ ಮುಂದೂಡಲಿ’ ಎಂದು ನವದೆಹಲಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಒಂದು ದಿನ ಬಜೆಟ್ ಮುಂದೂಡಿದರೆ ಏನೂ ತೊಂದರೆ ಇಲ್ಲ. ಹಿರಿಯ ಸಂಸದ ಇ ಅಹಮದ್ ರವರು ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಬಜೆಟ್ ಮಂಡನೆ ಅಮಾನವೀಯವಾಗಿದೆ.

LEAVE A REPLY

Please enter your comment!
Please enter your name here