ಇಂದು 11ನೇ ಅಂತಾರಾಜ್ಯ ಮಂಡಳಿ ಸಭೆ

0
313

ರಾಷ್ಟ್ರೀಯ ಪ್ರತಿನಿಧಿ ವರದಿ
ದೆಹಲಿಯಲ್ಲಿ ಇಂದು 11ನೇ ಅಂತಾರಾಜ್ಯ ಮಂಡಳಿ ಸಭೆ ನಡೆಯಲಿದೆ.ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
 
 
ಸಭೆಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಉಪಾಧ್ಯಕ್ಷತೆ ವಹಿಸಲಿದ್ದಾರೆ. ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸದಸ್ಯರು, ಕೇಂದ್ರದ ಕೆಲವು ಸಚಿವರು, ಸಿಎಂಗಳು ಭಾಗಿಯಾಗಲಿದ್ದಾರೆ.
 
 
ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ ಪರವಾಗಿ ಡಾ.ಪರಮೇಶ್ವರ್ ಭಾಗಿಯಾಗಲಿದ್ದಾರೆ. ತಮಿಳುನಾಡು ಸಿಎಂ ಜಯಾಲಲಿತಾ ಪರ ಮನ್ನೀರ್ ಸೆಲ್ವಂ ಭಾಗಿಯಾಗಲಿದ್ದಾರೆ.
 
 
ಕೇಂದ್ರ-ರಾಜ್ಯಗಳ ನಡುವಿನ ಸಂಬಂಧ, ಅಂತರಿಕ ಭದ್ರತೆ, ಗುಪ್ತದಳದ ಮಾಹಿತಿ ಹಂಚಿಕೆ, ಭಯೋತ್ಪಾದನೆ ನಿಗ್ರಹ, ಪೊಳಿಸ್ ವ್ಯವಸ್ಥೆ ಸುಧಾರಣೆ, ಆಧುನೀಕರಣ ಬಗ್ಗೆ ಅಂತಾರಾಜ್ಯ ಮಂಡಳಿ ಸಭೆಯಲ್ಲಿ ಚರ್ಚಿಸುವ ವಿಚಾರಗಳಾಗಿವೆ. ಹಿಂದಿನ ಯುಪಿಎ ಸರ್ಕಾರದಲ್ಲಿ 2 ಬಾರಿ ಸಭೆ ನಡೆದಿತ್ತು. ಈಗ ಎನ್ ಡಿಎ ಸರ್ಕಾರದಿಂದ ಮೊದಲ ಬಾರಿಗೆ ಸಭೆ ನಡೆಯುತ್ತಿದೆ.
 
 
ಕೇಂದ್ರ, ರಾಜ್ಯಗಳ ನಡುವಿನ ಸಂಬಂಧ ಸುಧಾರಿಸುವ ಬಗ್ಗೆ ಮತ್ತು ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರದ ಕ್ರಮ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here