ಇಂದು ೭೫ರ ಸಂಭ್ರಮ!

0
4224


ಹೌದು…ಇಂದು ನಮ್ಮ ನಿತ್ಯ ಅಂಕಣಕ್ಕೆ ೭೫ರ ಸಂಭ್ರಮ. ಆತ್ಮೀಯರಾದ ಶ್ರೀ ತಾರಾನಾಥ್‌ ಮೇಸ್ತ ಅವರ ಭಗವಾನ್ ನಿತ್ಯಾನಂದ ಸ್ವಾಮಿಗಳ ಜೀವನ ಚರಿತ್ರೆಯ ಒಂದೊಂದು ಎಳೆಗಳನ್ನು ಕಥೆಗಳಾಗಿ ವಾರ್ತೆ ಮೂಲಕ ಶ್ರೀ ನಿತ್ಯಾನಂದ ಗುರುಗಳ ಪರಮ ಭಕ್ತರಿಗೆ ಉಣಬಡಿಸುತ್ತಿರುವ ಅಂಕಣ ಮಾಲಿಕೆಗೆ ೭೫ರ ಹರುಷ. ಒಂದೊಂದು ಬರಹವೂ ರೋಮಾಂಚನ ಮೂಡಿಸುವಂತಹುದು…ಅದ್ಭುತ ವಿಪರ್ಯಾಸ ಮೂಡಿಸುವಂತಹುದು… ಗುರು ಮಹಿಮೆಯೆಂದರೆ ಅದೇ ಅಲ್ವಾ…ಓದಿ…ಅಭಿಪ್ರಾಯ ತಿಳಿಸಿ…ವಂದನೆಗಳು.

– ಸಂಪಾದಕ.

ನಿತ್ಯಾನಂದರು ಉಡುಪಿಯಲ್ಲಿ ಕೆಲವು ಸಮಯ ಕಳೆದವರು. ಒಮ್ಮೆ ಉಡುಪಿಯಲ್ಲಿ ನಿತ್ಯಾನಂದರು ಭಕ್ತರಿಗೆ ತೆಂಗಿನ ಕಾಯಿಯನ್ನು ನೀಡುತ್ತಿದ್ದರಂತೆ. ಬಹಳಷ್ಟು ಭಕ್ತರು ಗುರುದೇವರ ಕರಗಳಿಂದ ಕಲ್ಪಫಲ ಪ್ರಸಾದ ಪಡೆಯಲು ಶ್ರದ್ಧೆಯಿಂದ ನಿಂತಿದ್ದರು. ಒಬ್ಬೊಬ್ಬರಾಗಿ ಬಂದು ಗುರುದೇವರಿಂದ ತೆಂಗಿನ ಕಾಯಿಯನ್ನು ಸ್ವೀಕರಿಸಿದರು. ವಿವಾಹಿತ ಸ್ತ್ರೀಯರು, ಸಂಪ್ರಾಯದಂತೆ ತಮ್ಮ ಸೀರೆಯ ಸೆರಗೊಡ್ಡಿ ಸ್ವೀಕರಿಸಿದರು. ಮುತ್ತೈದೆ ಭಾಗ್ಯಕ್ಕೆ ಕಂಟಕ ಎದುರಾಗದಿರಲಿ ಎಂಬುವ ನಂಬಿಕೆಯಿಂದ ಅವರೆಲ್ಲ ಸ್ವೀಕರಿಸಿದರು.

ವಿವಾಹಿತ ಸ್ತ್ರೀಯರು ಸಾಲಿನಲ್ಲಿದ್ದ ಮಹಿಳೆಯೊರ್ವಳು ತನ್ನ ಉಚ್ಛ ಜಾತಿ ಪ್ರತಿಷ್ಠೆ ಬಗ್ಗೆ ಚಿಂತಿಸಿದಳು. ಯಾವ ಜಾತಿಯೆಂದು ತಿಳಿಯದ ನಿತ್ಯಾನಂದರಿಂದ, ನಾನು ಪ್ರಸಾದ ಸ್ವೀಕರಿಸುವುದು ಸರಿಯೇ..! ಎನ್ನುವ ಕೀಳು ಭಾವನೆ ಅವಳ ಮನದೊಳಗೆ ಸುಳಿದಾಡಿತು. ಮೇಲು ಕೀಳು ಎಂಬ ಜಾತಿ ಪಿಡುಗು ಇದ್ದ ಕಾಲವದು. ಸ್ವಾಮಿಗಳು ಅವಳಿಗೆ ಪ್ರಸಾದ ನೀಡಲೆಂದು ಕೈಯಲ್ಲಿ ತೆಂಗಿನ ಕಾಯಿ ಹಿಡಿದು ಕಾದರು. ಆದರೆ ಮಹಿಳೆ ಪ್ರಸಾದ ಸ್ವೀಕರಿಸದೆ ಹಿಂದೆ ಸರಿದಳು. ಗುರುದೇವರಿಗೆ ಮಹಿಳೆಯ ಅಂತರ್ಯದಲ್ಲಿ ಹುದುಗಿರುವ ಭಾವನೆ ಅರ್ಥವಾಯಿತು. ತಕ್ಷಣ ತನ್ನ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ಅವರು ಎಸೆದು ಬಿಟ್ಟರು. ಅವಳ ಬದುಕಿನಲ್ಲಿ ವಿಧಿ ಕಠೋರವಾಗಿ ವರ್ತಿಸಲಿದೆ ಏಂದೋ ಏನೋ…! ವಿಷಾದದಿಂದ ಗುರುದೇವರ ಹಾಗೆ ಮಾಡಿದರೋ ಏನೋ..?. ಕೆಲವು ತಿಂಗಳುಗಳಲ್ಲಿ ಸಣ್ಣ ಪ್ರಾಯದ ಮುತ್ತೈದೆ ವಿಧವೆಯಾಗುತ್ತಾಳೆ. ನಂತರದ ದಿನಗಳಲ್ಲಿ ಮಹಿಳೆಗೆ ತನ್ನ ತಪ್ಪಿನ ಅರಿವು ಆಗುತ್ತದೆ. ನಾನು ನಿತ್ಯಾನಂದರಲ್ಲಿ ನಂಬಿಕೆ ಶ್ರದ್ಧೆ ಇಟ್ಟುಕೊಂಡು, ಅವರು ನೀಡಿದ ಕಲ್ಪಫಲ ಪ್ರಸಾದ, ಸದ್ಗುರು ಪ್ರಸಾದ ಎಂದು ಸ್ವೀಕರಿಸಬೇಕಿತ್ತು. ತನಗೆ ಸಣ್ಣ ಪ್ರಾಯದಲ್ಲಿ ಎದುರಾಗಿರುವ ವಿಧವವಿಧಿಯಿಂದ ಪಾರಾಗಬಹುದಿತ್ತೋ ಏನೋ..! ಎಂದು ಆಕೆ ಕೊರಗುವಂತಳಾಗುತ್ತಾಳೆ.

ಒಬ್ಬ ಭಕ್ತನೊಬ್ಬ ಗಣೇಶಪುರಿಗೆ ಯಾವತ್ತೂ ಬರುತ್ತಲಿದ್ದ. ಹಾಗೆಯೇ ಗುರುದೇವರ ದರ್ಶನ ಪಡೆದು ತನ್ನೂರಿಗೆ ತೆರಳುತ್ತಿದ್ದ. ಒಮ್ಮೆ ಆತ ತನ್ನ ಕೊನೆಯ ಮಗುವನ್ನು ತನ್ನೊಂದಿಗೆ ಕರೆದುಕೊಂಡು ನಿತ್ಯಾನಂದರ ಬಳಿಗೆ ಬಂದಿದ್ದ. ಅದು ಅವನ ಐದನೇಯ ಮಗು. ಸ್ವಾಮಿಗಳಿಗೆ ಸಣ್ಣ ಮಕ್ಕಳೆಂದರೆ ಬಲುಪ್ರೀತಿ. ಮಗುವನ್ನು ತಂದೆಯಿಂದ ಪಡೆದ ಅವರು ಆಟವಾಡಿಸಿದರು. ಕೊನೆಗೆ ತಂದೆಯ ಕೈಯಲ್ಲಿ ಮಗುವನ್ನು ಇಟ್ಟು, “ನೀನು ಯಾಕೇ ಬೆಕ್ಕಿನ ಕುಟುಂಬದಂತೆ ಉತ್ಪಾದನೆ ಮಾಡುತ್ತಿರುವಿ..? ಹೋಗು ಶಸ್ತ್ರಚಿಕಿತ್ಸೆ ಮಾಡಿಸಿಕೋ” ಎಂದರಂತೆ. ಗುರುದೇವರಿಗೆ ಆ ಕಾಲದಲ್ಲಿಯೆ ಸಣ್ಣ ಕುಟುಂಬದ ವ್ಯವಸ್ಥೆ ಸೂಕ್ತ ಎಂಬ ಚಿಂತನೆ ಅವರಿಗಿತ್ತು. ದೇಶದಲ್ಲಿ ಏರುತ್ತಿರುವ ಜನ ಸಂಖ್ಯೆ ನಿಯಂತ್ರಿಸಲು, ಅಂದೆ ಗುರುದೇವರು ತನ್ನ ಬಳಿಗೆ ಬರುವ ದಂಪತಿಗಳಿಗೆ ಸಲಹೆಗಳ ನೀಡುತ್ತಿದ್ದರು. ಇದು ಗುರುದೇವರ ಸಾಮಾಜಿಕ ಕಳಕಳಿ ಎನ್ನಬಹುದು.

Advertisement

LEAVE A REPLY

Please enter your comment!
Please enter your name here