ಇಂದು ಹುಟ್ಟೂರಿನತ್ತ ಯೋಧನ ಪಾರ್ಥಿವ ಶರೀರ

0
533

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದಲ್ಲಿ ಹಿಮಕುಸಿದ ಪರಿಣಾಮ ಹುತಾತ್ಮನಾದ ಯೋಧ ಸಂದೀಪ್ ಪಾರ್ಥಿವ ಶರೀರ ರವಾನೆಯಾಗಿದೆ. ಶ್ರೀನಗರದಿಂದ ದೆಹಲಿಗೆ ಪಾರ್ಥಿವ ಶರೀರ ರವಾನೆಯಾಗಿದೆ.
 
 
 
ಸೇನಾ ಗೌರವ ವಂದನೆ ಸಲ್ಲಿಸಿದ ಬಳಿಕ ದೆಹಲಿಯತ್ತ ರವಾನೆಯಾಗಿದೆ. ರಕ್ಷಣಾ ಸಚಿವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಬಳಿಕ ಪಾರ್ಥಿವ ಶರೀರ ಹಾಸನದತ್ತ ರವಾನೆಯಾಗಿದ್ದು, ಇಂದು ಸಂಜೆಯೊಳಗೆ ತವರು ತಲುಪಲಿದೆ. ಸಂಜೆ ಸ್ವಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಗೆ ಹುಟ್ಟೂರು ದೇವಿಹಳ್ಳಿಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.
 
 
 
ಹುತಾತ್ಮರಾದ ಐವರು ಯೋಧರು:
ಜಮ್ಮು ಮತ್ತು ಕಾಶ್ಮೀರದ ಮಚಿಲ್ ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಐವರು ಯೋಧರನ್ನು ರಕ್ಷಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಐವರು ಸೋಮವಾರ ಹುತಾತ್ಮರಾಗಿದ್ದಾರೆ.
 
 
 
ಜಮ್ಮುಕಾಶ್ಮೀರದ ಸೋನಮಾರ್ಗ್ ನಲ್ಲಿರುವ ಸೇನಾಕ್ಯಾಂಪ್ ಮೇಲೆ ಹಿಮಬಂಡೆಕುಸಿತ ದುರಂತದಲ್ಲಿ ಕರ್ನಾಟಕ ಹಾಸನದ ಯೋಧ ಸಂದೀಪ್ ಕುಮಾರ್ ಸೇರಿ 15 ಮಂದಿ ಹುತಾತ್ಮರಾಗಿದ್ದಾರೆ. ಜನವರಿ 25ರ ಬೆಳಗ್ಗೆ ಜಮ್ಮುಕಾಶ್ಮೀರದ ಗುರೇಜ್ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ಹಿಮಕುಸಿದಿತ್ತು.
ಹಿಮಕುಸಿತ ದುರಂತದಲ್ಲಿ ಮೃತಪಟ್ಟ ಸೇನಾ ಯೋಧರ ವಿವರ:
ಮಹಾರಾಷ್ಟ್ರ ಮೂಲದ ಯೋಧ ಆನಂದ್ ಗವಾಯಿ, ಉತ್ತರಪ್ರದೇಶ ಮೂಲದ ಯೋಧ ಅಜಾದ್ ಸಿಂಗ್, ಮಧ್ಯಪ್ರದೇಶ ಮೂಲದ ದೇವೇಂದರ್ ಕುಮಾರ್ ಸೋನಿ, ತಮಿಳುನಾಡು ಮೂಲದ ಯೋಧ ಬಿ ಎಲವರಸನ್, ಆಂಧ್ರ ಪ್ರದೇಶ ಮೂಲದ ಯೋಧ ಮಾಮಿಡಿ ನಾಗರಾಜು, ಮಹಾರಾಷ್ಟ್ರ ಮೂಲದ ಯೋಧ ಸಮುಂದರೆ ವಿಕಾಸ್, ಮಹಾರಾಷ್ಟ್ರ ಮೂಲದ ಯೋಧ ಸಂಜುಸುರೇಶ್ ಖಂಡ್ರೆ, ತಮಿಳುನಾಡು ಮೂಲದ ಯೋಧ ಸುಂದರ್ ಪಾಂಡಿ, ಗುಜರಾತ್ ಮೂಲದ ಯೋಧ ಸುನಿಲ್ ಪಟೇಲ್, ಹರಿಯಾಣ ಮೂಲದ ಯೋಧ ಅಂಕುರ್ ಸಿಂಗ್ ಸೇರಿ 15 ಮಂದಿ ಹುತಾತ್ಮರಾಗಿದ್ದಾರೆ.

LEAVE A REPLY

Please enter your comment!
Please enter your name here