ರಾಷ್ಟ್ರೀಯ ಪ್ರತಿನಿಧಿ ವರದಿ
ಶಶಿಕಲಾ ವಿರುದ್ಧ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ಶಶಿಕಲಾ ನಟರಾಜನ್ ಮುಮಜಾನೆ ಎದ್ದು ದೇವರ ಮೊರೆ ಹೋಗಿದ್ದು, ಪೂಜೆ ನೇರವೇರಿಸಿದ್ದಾರೆ. ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಚೆನ್ನೈನಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ನಗರದಲ್ಲಿ ಒಟ್ಟು 25 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಶಸ್ತ್ರ ಮೀಸಲು ಪಡೆ, ಆರ್ ಎ ಎಫ್ ನ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಚೆನ್ನೈ ನಗರದ ಪ್ರಮುಖ ರಸ್ತೆಗಳು, ಪೋಯಸ್ ಗಾರ್ಡನ್, ಎಐಎಡಿಎಂಕೆ, ಡಿಎಂಕೆ ಪಕ್ಷಗಳ ಕಚೇರಿಗಳು ಸೇರಿದಂತೆ ಮಾಜಿ ಸಿಎಂ ಕರುಣಾನಿಧಿ ಸ್ಟಾಲಿನ್ ನಿವಾಸಕ್ಕೂ ಭದ್ರತೆ ನೀಡಲಾಗಿದೆ.
ಮುನ್ನೆಚ್ಚರಿಕೆಯಿಂದ ಚೆನ್ನೈ ನಗರದಲ್ಲಿ 150 ಜನರ ಬಂಧನ ಮಾಡಲಾಗಿದೆ. ತಮಿಳುನಾಡಿನಾದ್ಯಂತ ಪೊಲೀಸರು 1500 ಜನರನ್ನು ಬಂಧನ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.