ಇಂದು ಸಿಎಂ ದೆಹಲಿ ಪ್ರವಾಸ

0
231

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೈಕಮಾಂಡ್ ಜತೆ ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಲು ಸಿಎಂ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.
 
 
 
ಸಂಪುಟ ರಚನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶಿಮ್ಲಾದಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇಂದು ದೆಹಲಿಗೆ ಮರಳಲಿದ್ದಾರೆ. ನಾಳೆ ಸಿಎಂ ಸಿದ್ದು ಜತೆ ಸೋನಿಯಾ ಮಾತುಕತೆ ನಡೆಸಲಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಅಚಿವ ದಿಗ್ವಿಜಯ್ ಸಿಂಗ್ ಕೂಡ ಇಂದು ಹೈದರಾಬಾದ್ ನಿಂದ ದೆಹಲಿಗೆ ಬರಲಿದ್ದಾರೆ. ಇಂದು ಸಂಜೆ ದಿಗ್ವಜಯ್ ಸಿಂಗ್ ಅವರನ್ನು ಸಿಎಂ ಭೇಟಿಯಾಗಲಿದ್ದಾರೆ.
 
ದೆಹಲಿಯಲ್ಲಿ ರಾಜ್ಯ ಶಾಸಕರ ಲಾಬಿ
ಇಂದು ಕಾಂಗ್ರೆಸ್ ನಾಯಕರು ನವದೆಹಲಿಗೆ ತೆರಳಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿ ಕಾಂಗ್ರೆಸ್ ಶಾಸಕರು ದೆಹಲಿಯತ್ತ ಮುಖಮಾಡಿದ್ದಾರೆ. ಕೆ.ಬಿ.ಕೋಳಿವಾಡ, ಮೋಟಮ್ಮ, ಬಸವರಾಜ ರಾಯರೆಡ್ಡಿ, ಕೆ ಸಿ ಕೊಂಡಯ್ಯ, ಡಾ ಎ ಬಿ ಮಾಲಕರೆಡ್ಡಿ, ರಮೇಶ್ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ, ಎಂ ಆರ್ ಸೀತಾರಾಮ್, ಜಿ ಎಸ್ ಪಾಟೀಲ್ ಸೇರಿ ಹಲವರುಶಾಸಕರು ದೆಹಲಿಗೆ ತೆರಳಲಿದ್ದಾರೆ.
ಇನ್ನು ಅಶೋಕ್ ಪಟ್ಟಣ್, ಹೆಚ್ ಎಂ ರೇವಣ್ಣ ಸೇರಿ ಕೆಲವು ಶಾಸಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here