ಇಂದು ಸಲ್ಮಾನ್ ಗೆ ಅಗ್ನಿ ಪರೀಕ್ಷೆ

0
288

ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ ನಡೆಯಲಿದೆ. ನಟ ಸಲ್ಮಾನ್ ವಿರುದ್ಧದ ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ.
 
 
 
ರಾಜಸ್ತಾನದ ಜೋಧ್ ಪುರ ಸೆಷನ್ ಕೋರ್ಟ್ ನಿಂದ ತೀರ್ಪು ಹೊರಬರಲಿದೆ. ನ್ಯಾಯಾಧೀಶ ದಲ್ಪತ್ ಸಿಂಗ್ ರಾಜ್ ಪುರೋಹಿತ್ ತೀರ್ಪು ನೀಡಲಿದೆ. 1998ರ ಅಕ್ಟೋಬರ್ 1 ಮತ್ತು 2ರಂದು ಕೃಷ್ಣಮೃಗ ಭೇಟಿ, ಅಕ್ರಮ ಶಸ್ತ್ರಾಸ್ತ್ರ ಬಳಕೆ ಆರೋಪ ದಾಖಲಾಗಿತ್ತು. ಈ ವೇಳೆ ಲೈಸೆನ್ಸ್ ಅವಧಿ ಮುಗಿದ ರಿವಾಲ್ವರ್ ಹೊಂದಿದ ಆರೋಪವಿತ್ತು. 18 ವರ್ಷಗಳ ಹಿಂದೆ ಸಲ್ಮಾನ್ ಖಾನ್ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಶಸ್ತ್ರಾಸ್ತ್ರ ಬಳಕೆಯ ನಿರ್ಬಂಧ ಕಾಯಿದೆಯಡಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಸೆಷನ್ ಕೋರ್ಟ್ ನಲ್ಲಿ ವಿಸ್ತೃತ ವಿಚಾರಣೆ ನಡೆದಿತ್ತು. ಆರೋಪ ಸಾಬೀತಾದ್ರೆ ಸಲ್ಮಾನ್ ಗೆ ಗರಿಷ್ಟ 3 ವರ್ಷ ಶಿಕ್ಷೆ ಸಾಧ್ಯತೆ ಇದೆ.
 
 
 
ತೀರ್ಪು ಹಿನ್ನೆಲೆ ಖುದ್ದು ಹಾಜರಿರುವಂತೆ ಸೆಷನ್ ಕೋರ್ಟ್ ಸೂಚನೆ ನೀಡಿದೆ. ಸಲ್ಮಾನ್ ಖಾನ್ ಜೊತೆ ಸೈಫ್ ಅಲಿ ಖಾನ್, ಟಬು, ನೀಲಂ, ಸೊನಾಲಿ ಬೆಂದ್ರೆಗೂ ಕೋರ್ಟ್ ಗೆ ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದೆ.
 
 
 
‘ಹಮ್ ಸಾಥ್ ಸಾಥ್ ಹೇ’ ಶೂಟಿಂಗ್ ವೇಳೆ ಘಟನೆ ನಡೆದಿತ್ತು. ಇದೇ ಘಟನೆ ಸಂಬಂಧ ಸಲ್ಮಾನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಕೃಷ್ಣಮೃಗ ಬೇಟೆ ಕೇಸ್ ನಲ್ಲಿ ಈಗಾಗಲೇ ಸಲ್ಮಾನ್ ಖುಲಾಸೆಯಾಗಿದೆ. ಆದರೆ ಬೇಟೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇಂದು ಅಕ್ರಮ ಶಸ್ತ್ರಾಸ್ತ್ರ ಬಳಕೆ ಆರೋಪ ಸಂಬಂಧಿತ ತೀರ್ಪು ಹೊರಬರಲಿದೆ.

LEAVE A REPLY

Please enter your comment!
Please enter your name here