ಇಂದು ಸಭೆ

0
435

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿಗೆ ಕಾವೇರಿ ನೀರು ಹರಿಸೋ ವಿಚಾರ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಕೇಂದ್ರದ ಮಧ್ಯಸ್ಠಿಕೆಯಲ್ಲಿ ಇಂದು ತಮಿಳುನಾಡು ಮತ್ತು ಕರ್ನಾಟಕದ ಸಭೆ ನಡೆಯಲಿದೆ.
 
 
ಕೇಂದ್ರ ಸರ್ಕಾರ ಕರೆದಿರುವ ಕರ್ನಾಟಕ-ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ನಂತರ ನೀರು ಬಿಡುವ ಬಗ್ಗೆ ನಿರ್ಧರಿಸಲಾಗುವುದು. ಸುಪ್ರೀಂಕೋರ್ಟ್ ಹೊರಗೇ ಕಾವೇರಿ ವಿವಾದ ಬಗೆಹರಿಯುತ್ತಾ ಎಂದು ಕಾದು ನೋಡಬೇಕಿದೆ.
 
ಕೇಂದ್ರ ಸಚಿವೆ ಉಮಾಭಾರತೀ ಅವರ ಮಧ್ಯಸ್ಥಿಕೆಯಲ್ಲಿ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ರಾಜ್ಯ ಜಲಸಂಪನ್ಮೂಲ ಸಚಿವ ಎಂ ಪಿ ಪಾಟೀಲ್ ಮತ್ತು ತಮಿಳುನಾಡು ಸಚಿವರೊಬ್ಬರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅನಾರೋಗ್ಯದ ಕಾರಣದಿಂದ ತಮಿಳುನಾಡು ಸಿಎಂ ಜಯಲಲಿತಾ ಅವರು ಭಾಗವಹಿಸುವುದಿಲ್ಲ. ಇವರ ಬದಲು ತಮಿಳುನಾಡು ಸಚಿವರೊಬ್ಬರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here