ಇಂದು ಶಸ್ತ್ರಚಿಕಿತ್ಸೆ

0
518

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ.
 
 
ಏಮ್ಸ್ ಆಸ್ಪತ್ರೆಯ ನಿರ್ದೆಶಕರಾದ ಎಂಸಿ ಮಿಶ್ರಾ, ತಜ್ಞರಾದ ವಿ ಕೆ ಬನ್ಸಾಲ್ ಮತ್ತು ಸಂದೀಪ್ ಅಗರ್ ವಾಲ್ ನೇತೃತ್ವದ ತಂಡದಿಂದ ಶಸ್ತ್ರಚಿಕಿತ್ಸೆ ನಡೆಯಲಿದೆ.
 
 
ಜೀವಂತವಿರುವ ದಾನಿಯಿಂದ ಕಿಡ್ನಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಕಿಡ್ನಿ ದಾನ ಮಾಡುತ್ತಿರುವವರು ಹಾಗೂ ಸುಷ್ಮಾ ಸ್ವರಾಜ್ ಅವರ ಕಿಡ್ನಿ ಹೊಂದಾಣಿಕೆಯಾಗಿದೆ. ಕಿಡ್ನಿ ಹೊಂದಾಣಿಕೆ ತಪಾಸಣೆ ಸಂಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ದಿನ ನಿಗದಿಯಾಗಿದೆ.

LEAVE A REPLY

Please enter your comment!
Please enter your name here