ಇಂದು ವಿಶ್ವ ಹೈಪಟೈಟಿಸ್ ದಿನ

0
409

ವಿಶೇಷ ಲೇಖನ
ಇಂದು ವಿಶ್ವ ಹೈಪಟೈಟಿಸ್ ದಿನವಾಗಿದೆ. ಜು.28ರಂದು ವಿಶ್ವ ಹೈಪಟೈಟಿಸ್ ದಿನವನ್ನಾಗಿ ಆಚರಿಸುತ್ತಾರೆ.
ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಬಗೆಯ ಉರಿಯೂತ ಸತತ ಮದ್ಯಪಾನ ಸೇವನೆಯಿಂದಲೂ ಉಂಟಾಗಿರಬಹುದು ಅಥವಾ ವೈರಸ್ಸುಗಳೂ ಕಾರಣವಾಗಿರಬಹುದು. ಹೈಪಟೈಟಿಸನ್ನು ಹೈಪಟೈಟಿಸ್ ಎ, ಬಿ. ಸಿ, ಇ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್ಸುಗಳಿಂದಲೂ ಹರಡಬಹುದು
ಹೆಪಟೈಟಿಸ್ ಬಿ ಸೋಂಕು ತಗುಲಿದ ಆರು ತಿಂಗಳಲ್ಲಿ ಆ ವೈರಸ್ಸಿನ ಪ್ರಭಾವದಿಂದ ಹೊರ ಬರುತ್ತಾರೆ. ಅಲ್ಪಾವಧಿ ಸೋಂಕನ್ನು ಹೆಪಟೈಟಿಸ್ ಬಿ ತೀವ್ರ ಪ್ರಕರಣ ಎಂದು ಗುರುತಿಸಲಾಗುತ್ತದೆ.
 
hepatitis world day1
 
ಕಾರಣಗಳು
ಆಸ್ಪತ್ರೆಗಳಲ್ಲಿ ರೋಗಿಯ ರಕ್ತದೊಂದಿಗೆ ಸಂಪರ್ಕ ಬಂದಾಗ
ಸೋಂಕುಪೀಡಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕತೆ
ರಕ್ತಪೂರಣ ಪ್ರಕ್ರಿಯೆ
ಮಾದಕ ವ್ಯಸನದಲ್ಲಿ, –ಒಬ್ಬರ ಸೂಜಿಯನ್ನು ಮತ್ತೊಬ್ಬರು ಬಳಸಿದಾಗ
ಕಲುಷಿತ ಸಾಧನಗಳನ್ನು ಬಳಸಿ, ಹಚ್ಚೆ ಅಥವಾ ಆಕ್ಯುಪೆಂಚರ್ ಚಿಕಿತ್ಸೆ ಪಡೆದಾಗ
ಜನನದಲ್ಲಿ –ಸೋಂಕು ಪೀಡಿತ ತಾಯಿಯಿಂದ ಮಗುವಿಗೆ ಸೋಂಕು ಹರಡಬಹುದು.
 
 
ರೋಗ ಲಕ್ಷಣಗಳು
ಆಯಾಸ, ಕೀಲು ನೋವು, ಸಣ್ಣಗೆ ಜ್ವರ ,
ತಲೆಸುತ್ತುವಿಕೆ, ವಾಂತಿ, ಹಸಿವಾಗದಿರುವಿಕೆ ಮತ್ತು ಹೊಟ್ಟೆ ನೋವು
ಕಾಮಾಲೆ ಹಾಗೂ ಗಾಢ ವರ್ಣದ ಮೂತ್ರ
 
 
ಪರೀಕ್ಷೆಗಳು ಮತ್ತು ತಪಾಸಣೆಗಳು
ಹೆಪಟೈಟಿಸ್ ಬಿ ಸರ್ಫೇಸ್ ಆಂಟಿಜೆನ್ (ಹೆಚ್ ಬಿ ಎಸ್ ಏ ಗಿ ) — ಸೋಂಕು ತಗುಲಿದ ನಂತರ ರೋಗಿಗೆ ನಡೆಸುವ ಈ ರಕ್ತ ಪರೀಕ್ಷೆಯ ಮೂಲಕ ವೈರಸ್ಸನ್ನು ಪತ್ತೆ ಹಚ್ಚಬಹುದು. ಇಂದು ಸುಮಾರು 1-2 ತಿಂಗಳಲ್ಲಿ ಈ ವೈರಸ್ಸು, ರಕ್ತದಿಂದ ನಾಪತ್ತೆಯಾಗುತ್ತದೆ.
ಹೆಪಟೈಟಿಸ್ ಬಿ ಕೋರ್ ಅಂಟಿಬಾಡಿ (ಅಂಟಿ -ಹೆಚ್ ಬಿ ಸಿ ) –ಈ ಪರೀಕ್ಷೆಯನ್ನು ಹೆಪಟೈಟಿಸ್ ಬಿ ಆಂಟಿಜೆನ್ ಪತ್ತೆಯಾದ ಒಂದೆರಡು ವಾರಗಳಲ್ಲಿ ನಡೆಸಲಾಗುತ್ತದೆ.
ಹೆಪಟೈಟಿಸ್ ಬಿ ಸರ್ಫೇಸ್ ಆಂಡಿಬಾಡಿ (ಅಂಟಿ-ಹೆಚ್ ಬಿ ಎಸ್ ) –ಲಸಿಕೆ ಹಾಕಿಸಿಕೊಂಡವರಲ್ಲಿ ಹಾಗೂ ರೋಗದಿಂದ ಈಚೆಗಷ್ಟೇ ಗುಣಮುಖರಾದವರಲ್ಲಿ ಕಂಡು ಬರುತ್ತವೆ.
ಹೆಪಟೈಟಿಸ್ ಬಿ ಸರ್ಫೇಸ್ ಆಂಟಿಬಾಡಿ ಹಾಗೂ ಕೋರ್ ಆಂಟಿಬಾಡಿಗಳೆರಡೂ, ಹೆಪಟೈಟಿಸ್ ಬಿ ರೋಗದಿಂದ ಗುಣಮುಖರಾದವರಲ್ಲೂ ಕಂಡು ಬರುತ್ತದೆ.
ಯಕೃತ್ತಿಗೆ ತೀವ್ರ ಹಾನಿಯಾಗಿರುವುದರಿಂದ, ರಕ್ತದಲ್ಲಿ ಯಕೃತ್ತಿನ ಎಂಜೈಮುಗಳ ಮಟ್ಟ ಹೆಚ್ಚಾಗಿ ಕಂಡು ಬರುತ್ತವೆ.
ಅಲ್ಬುಮಿನ್ ಮಟ್ಟ ಕಡಿಮೆಯಾಗುತ್ತವೆ ಮತ್ತು ಪ್ರೋತ್ರೋಂಬಿನ್ ಕಾಲವು ಕೊಂಚ ಹೆಚ್ಚಾಗಿಯೇ ಇರುತ್ತದೆ.

LEAVE A REPLY

Please enter your comment!
Please enter your name here