ಅಂಕಣಗಳುದೇಶಪ್ರಮುಖ ಸುದ್ದಿವಾರ್ತೆ

ಇಂದು ವಿಶ್ವ ಜಲ ದಿನ

ವಾರ್ತೆ ವಿಶೇಷ ಲೇಖನ
‘ಜಲ’ ಇದು ಪ್ರತಿಯೊಂದು ಜೀವಿಯ ಜೀವನಕ್ಕೆ ಪ್ರಮುಖವಾಗಿದೆ. ಇದು ಜೀವಿತಾವಧಿಯ ಒಂದು ಪ್ರಮುಖ ಭಾಗವೆಂದರೂ ತಪ್ಪಗಲಾರದು. ಮನುಷ್ಯನು ಊಟ ತಿಂಡಿ ಹಾಗೂ ನಿದ್ರೆಯಿಲ್ಲದೇ ಜೀವಿಸಬಲ್ಲ. ಆದರೆ ಬದುಕಿನ ಅವಿಭಾಜ್ಯ ಅಂಗವಾದ ಗಾಳಿ ಮತ್ತು ನೀರಿಲ್ಲದೇ ಬದುಕುವುದು ಕಷ್ಟಸಾಧ್ಯ. ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವಾದ್ಯಂತ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
 
 
 
ನಮ್ಮ ಬಹುತೇಕ ನಾಗರಿಕತೆಗಳು ಹುಟ್ಟಿಕೊಂಡಿದ್ದೇ ನದಿ ದಂಡೆಯಲ್ಲೇ. ನೀರು ಇದ್ದ ಕಡೆ ಜೀವಸಂಕುಲಗಳ ಬೆಳವಣಿಗೆಯಾಗುತ್ತದೆ. ನೀರಿಲ್ಲದೆ ಕಡೆ ಬರಡು ಮನೆ ಮಾಡಿರುತ್ತದೆ. ನೀರಿನ ಬಹುಉಪಯೋಗವನ್ನು ಅರಿತೇ ಜನರು ನೀರಿಗೆ ಪವಿತ್ರ ಸ್ಥಾನವನ್ನು ನೀಡಿದ್ದಾರೆ. ಅದರಲ್ಲೂ ಭಾರತ ದೇಶದಲ್ಲಿ ನೀರನ್ನು ದೇವಿ ಸ್ವರೂಪಿಯಾದ ಜಲದೇವತೆ ಎಂದು ಪೂಜಿಸಲಾಗುತ್ತದೆ. ಜಲ ಮೂಲಗಳಾದ ನದಿ, ಕೆರೆ, ಸಮುದ್ರಗಳಿಗೆ ಭಾರತೀಯರು ಪೂಜೆ ಸಲ್ಲಿಸುತ್ತಾರೆ.
 
 
ಅಂತರ್ಜಲ ಕುಸಿತ ಕಾರಣವೇನು ಗೊತ್ತಾ..?
ವಿಶ್ವದಲ್ಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಹೀಗೆ ಮತ್ತಿತರ ಕಾರಣಗಳಿಂದ ಈಗಾಗಲೇ ನೀರಿನ ಅಭಾವ ಕಂಡುಬಂದಿದೆ. ಅರಣ್ಯ ನಾಶವೇ ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಕಾಡುಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದ್ದು, ಇದರಿಂದ ಭೂಮಿಯಲ್ಲಿ ನೀರಿನ ಅಂಶವೂ ಕಡಿಮೆಯಾಗುತ್ತದೆ. ಅರಣ್ಯ ನಾಶವಾಗಿ ಭೂಮಿ ಬಂಜರಾಗುತ್ತಾ, ಮೇಲ್ಮಣ್ಣು ಕೊಚ್ಚಿ ಹೋದಾಗ ನೀರು ಇಂಗುವ ಸಾಮಥ್ರ್ಯವೂ ಕಡಿಮೆಯಾಗುತ್ತದೆ. ಪಕ್ಕಪಕ್ಕದಲ್ಲೇ ಕೊಳವೆ ಬಾವಿ ಕೊರೆಯುವುದು ಕೂಡ ನೀರಿನ ಅಭಾವಕ್ಕೆ ಕಾರಣವಾಗಿದೆ. ಇದರಿಂದ ಮರಗಳನ್ನು ಬೆಳೆಸಿ ನೀರಿನ ಅಭಾವಕ್ಕೆ ಕೊನೆಗಾಣಿಸಬಹುದಾಗಿದೆ.
 
 
ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಧಾರ
1993ರಲ್ಲಿ ಬ್ರೆಜಿಲ್ ನ ರಿಯೋ ಡಿಜನೈರೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ತೀರ್ಮಾನದಂತೆ ಅಂದಿನಿಂದ ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.
 
 
ಜಲ ದಿನದ ಘೋಷಣೆಗಳು:
ಪ್ರತಿ ವರ್ಷ ವಿಶ್ವ ಸಂಸ್ಥೆಯಲ್ಲಿ ವಿಶ್ವ ಜಲ ದಿನದಂದು ಘೋಷಣೆಗಳನ್ನು ಘೋಷಿಸಲಾಗುತ್ತದೆ. ಘೋಷಣೆಗಳ ವಿವರ ಈ ರೀತಿಯಿದೆ:
1994- ಎಲ್ಲರ ಚಿತ್ತ ಜಲಸಂಪನ್ಮೂಲ ದತ್ತ
1995- ಮಹಿಳೆ ಮತ್ತು ನೀರು
1996- ಬಾಯಾರಿದ ನಗರಗಳಿಗೆ ನೀರು
1997- ಜಗತ್ತಿನಲ್ಲಿರುವ ನೀರು ಸಾಲುತ್ತದೆಯೇ?
1998- ಅಂತರ್ಜಲ ಗುಪ್ತ ಸಂಪನ್ಮೂಲ
1999- ಕೆಳಸ್ತರದಲ್ಲಿ ಬದುಕುವವರಿಗೂ ನೀರು
2000- 21ನೇ ಶತಮಾನದಲ್ಲಿ ಜಲ, ನೆಲ
2001- ಉತ್ತಮ ಆರೋಗ್ಯಕ್ಕೊಂದು ಯಶಸ್ವೀ ನೀರಿನ ಸೂತ್ರ
2002- ಅಭಿವೃದ್ಧಿಯ ಪಥದತ್ತ ನೀರು
2003- ಭವಿಷ್ಯದ ಉಳಿವಿಗಾಗಿ ನೀರು
2004- ನೀರು ಮತ್ತು ಪ್ರವಾಹ
2005- ಬದುಕಿಗೆ ನೀರು ಆಧಾರ
2006- ಸಂಪ್ರದಾಯ ಮತ್ತು ನೀರು
2007- ಜಲ ಕ್ಷಾಮದ ನಿರ್ವಹಣೆ
2008- ಉತ್ತಮ ಒಳಚರಂಡಿ ವ್ಯವಸ್ಥೆ
2009- ಶುದ್ಧ ನೀರು ಮತ್ತು ಅಚ್ಚುಕಟ್ಟಾದ ಚರಂಡಿ
2010- ಆರೋಗ್ಯಕ್ಕಾಗಿ ಸ್ವಚ್ಛ ನೀರು
2005-2015- ನೀರಿನ ಜಾಗೃತ ವರ್ಷ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here