ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆ ನಡೆಯಲಿದೆ. ಸಿಎಂ ಇ.ಪಳನಿಸ್ವಾಮಿ ವಿಶ್ವಾಸಮತ ನಿರ್ಣಯ ಮಂಡಿಸಲಿದ್ದಾರೆ.
ನಿರ್ಣಯದ ಮೇಲೆ ಪ್ರತಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್ ಮತ್ತು ಕಾಂಗ್ರೆಸ್ ನಾಯಕ ರಾಮಸ್ವಾಮಿ ಭಾಷಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಪನ್ನೀರ್ ಸೆಲ್ವಂಗೆ ಸದನದಲ್ಲಿ ಭಾಷಣ ಮಾಡಲು ಅವಕಾಶವಿಲ್ಲ. ಬಳಿಕ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು.
ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರ ವ್ಯವಸ್ಥೆ ಲಭ್ಯವಿಲ್ಲ. ಸದನದಲ್ಲಿ ಶಾಸಕರ ತಲೆ ಎಣಿಕೆ ಪ್ರಕ್ರಿಯೆ ನಡೆಯಲಿದೆ.ಮತ ವಿಭಜನೆಗೆ ಕೋರಿದಲ್ಲಿ ಶಾಸಕರ ತಲೆ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನಂತರ ಶಾಸಕರಿಗೆ ಎದ್ದುನಿಲ್ಲಲ್ಲು ಅಥವಾ ಕೈಎತ್ತಲು ತಿಳಿಸಲಾಗುವುದು ಎಂದು ತಮಿಳುನಾಡು ವಿಧಾನಸಭೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.