ಇಂದು ಮಧ್ಯಾಹ್ನ ಅಂತ್ಯಕ್ರಿಯೆ

0
421

ಚಾಮರಾಜನಗರ ಪ್ರತಿನಿಧಿ ವರದಿ
ಹಿರಿಯ ಸಚಿವ ಹೆಚ್ ಎಸ್ ಮಹದೇವ ಪ್ರಸಾದ್ ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರ ಜಿಲ್ಲೆಯ ಗುಮಡ್ಲುಪೇಟೆ ತಾಲೂಕಿನ ಹಾಲಹಳ್ಳಿಯ ನಿವಾಸದ ಬಳಿ ಸಚಿವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
 
 
 
ಮನೆ ಸಮೀಪದ ಮೈದಾನದಲ್ಲಿ ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮೆರವಣಿಗೆಯ ಮೂಲಕ ಹಾಲಹಳ್ಳಿ ಬಳಿ ಇರುವ ತೋಡಕ್ಕೆ ಪಾರ್ಥಿವ ಶರೀರ ರವಾನೆಯಾಗಲಿದೆ. ಇಂದು ಮಧ್ಯಾಹ್ನ 2.30ರ ಬಳಿ ಮಹದೇಹ ಪ್ರಸಾದ್ ಅಂತ್ಯಕ್ರಿಯೆ ನಡೆಯಲಿದೆ. ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here