ಇಂದು ಮಂತ್ರಿಮಾಲ್ ಪುನಾರಂಭ

0
457

ಬೆಂಗಳೂರು ಪ್ರತಿನಿಧಿ ವರದಿ
ಶಾಪಿಂಗ್ ಪ್ರಿಯರಿಂದ ಶುಭ ಸುದ್ದಿಯೊಂದಿದೆ. ಕಳೆದ ಒಂದೂವರೆ ತಿಂಗಳು ಬಳಿಕ ನಗರದ ಪ್ರಮುಖ ಮಾಲ್’ಗಳಲ್ಲಿ ಒಂದಾಗಿದ್ದ ಮಂತ್ರಿಮಾಲ್ ಇಂದು ಫೆ.26 ರಂದು ಪುನಾರಂಭವಾಗಲಿದೆ.
 
 
 
ಮಾಲ್ ಮತ್ತೆ ತೆರೆಯಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ತಿಂಗಳ 16ರಂದು ಮಾಲ್’ನ ಹಿಂಬದಿಯ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದ ಕಾರಣ ಅಂದಿನಿಂದ ಭದ್ರತೆಯ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮಾಲ್ ಮುಚ್ಚುವಂತೆ ಆದೇಶ ನೀಡಿತ್ತು.

LEAVE A REPLY

Please enter your comment!
Please enter your name here