ಇಂದು ಬ್ಯಾಂಕ್ ಮುಷ್ಕರ

0
616

ನಮ್ಮ ಪ್ರತಿನಿಧಿ ವರದಿ
ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಇಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿದೆ.
 
 
 
ಮುಷ್ಕರ ಕರೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಬ್ಯಾಂಕ್‌ಗಳ ವ್ಯವಹಾರಗಳು ಸ್ಥಗಿತವಾಗಿದೆ. ಗ್ರಾಹಕರು ಹಣ ಡ್ರಾಗಾಗಿ ಎಟಿಎಂಗಳನ್ನು ಆಶ್ರಯಿಸಿದ್ದಾರೆ.
ಕೇಂದ್ರ ಸರ್ಕಾರ ಬ್ಯಾಂಕುಗಳ ಸುಧಾರಣೆ ಹೆಸರಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕ ವಿರೋದಿ ನೀತಿಗಳನ್ನು ಸೇರಿಸಲು ಮುಂದಾಗಿದೆ. ಕಾಯ್ದೆ ತಿದ್ದುಪಡಿಯಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವೇದಿಕೆ ಸಂಚಾಲಕ ಎಚ್‌.ವಿ.ವಸಂತ ರೈ ತಿಳಿಸಿದ್ದಾರೆ.
 
 
 
ಹೀಗಾಗಿ, ಕೂಡಲೇ ಆಲೋಚನೆಯನ್ನು ಸರ್ಕಾರ ಕೈಬಿಡಬೇಕು. ಅದೇ ರೀತಿ 2016ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ಕಾರ್ಮಿಕರಿಗೆ 20 ಲಕ್ಷ ರೂ. ಗ್ರಾಜ್ಯುಟಿ ಸೌಲಭ್ಯ ಮರು ಜಾರಿ ಮಾಡಬೇಕು ಎಂದು
ಆಗ್ರಹಿಸಿದರು.

LEAVE A REPLY

Please enter your comment!
Please enter your name here