ಇಂದು ನ್ಯಾಯ ಸಿಗುತ್ತಾ…?

0
287

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದ ಹಿನ್ನಲೆಯಲ್ಲಿ ಇಂಡು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ. ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
 
 
ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಅಮಿತ್ ರಾಯ್, ಜಸ್ಟೀಸ್ ಅಜಯ್ ಮಾನಿಕರಾವ್ ಕನವಿಲ್ ಕರ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.
 
 
2007ರ ಫೆಬ್ರವರಿ 5ರಂದು ಕಾವೇರಿ ನ್ಯಾಯಾಧಿಕರಣ ಅಂತಿಮ ಐ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಇದಾಗಿದೆ.
 
 
ನೀರಿನ ಪ್ರಮಾಣ ಇಳಿಸಿ:
ಕರ್ನಾಟಕಕ್ಕೆ ಕಾವೇರಿ ನದಿ ನೀರು ಹೆಚ್ಚಿಸಬೇಕು. 270 ಟಿಎಂಸಿಯಿಂದ 350 ಟಿಎಂಸಿಗೆ ಹಂಚಿಕೆ ಏರಿಸಬೇಕು. ರಾಜ್ಯದಿಂದ ತಮಿಳುನಾಡಿಗೆ ಹರಿಸುವ ಕಾವೇರಿ ನೀರಿನ ಪ್ರಮಾಣವನ್ನು ಇಳಿಸುವಂತೆ ಮನವಿ ಮಾಡಲಾಗಿದೆ. ವಾರ್ಷಿಕ 192 ಟಿಎಂಸಿಯಿಂದ 170 ಟಿಎಂಸಿ ಗೆ ಇಳಿಸಬೇಕು.
 
ಕಾವೇರಿ ನೀರು ನಿರ್ವಹಣಾ ಮಂಡಳಿ, ನಿಯಂತ್ರಣ ಸಮಿತಿ ರಚನೆ ಬೇಡವೆಂದು ರಾಜ್ಯ ಸರ್ಕಾರ ಕೋರಿದೆ. ಬ್ರಿಟಿಷ್ ಕಾಲದ ಕಾವೇರಿ ನೀರು ಒಪ್ಪಂದಕ್ಕೆ ಮಾನ್ಯತೆ ಬೇಡ. ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಸಲ್ಲಿಸಿರುವ ಮೇಲ್ಮನವಿಯ ಪ್ರಮುಖಾಂಶಗಳಾಗಿವೆ.

LEAVE A REPLY

Please enter your comment!
Please enter your name here