ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಇಂದು ಸಂಜೆ 4.30ಕ್ಕೆ ನೂತನ ಸಿಎಂ ಆಗಿದೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಎಂ ಜತೆ ಮೂವತ್ತು ಸಚಿವರು ಪದಗ್ರಹಣ ಮಾಡಲಿದ್ದಾರೆ. ಚೆನ್ನೈನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ನೂತನ ಮೂವತ್ತೂ ಸಚಿವರಿಗೆ ಈಗಾಗಲೇ ಖಾತೆ ನಿಗದಿಯಾಗಿದೆ. ಖಾತೆಗಳ ವಿವರ:
ಸಿ.ಶ್ರೀನಿವಾಸನ್-ಅರಣ್ಯ ಖಾತೆ
ಕೆ.ರಾಜು.-ಸಹಕಾರ ಖಾತೆ
ಕೆ.ಎ.ಸೆಂಗೊಟ್ಟಿಯನ್-ಶಾಲಾ ಶಿಕ್ಷಣ ಸಚಿವ
ಕೆ.ಎ.ಸೆಂಗೊಟ್ಟಿಯನ್-ಕ್ರೀಡೆ ಮತ್ತು ಯುವಕರ ಕಲ್ಯಾಣ ಖಾತೆ
ಪಿ.ತಂಗಮಣಿ-ಇಂಧನ ಮತ್ತು ಅಬಕಾರಿ ಖಾತೆ
ಎಸ್.ಪಿ.ವೇಲುಮಣಿ-ಪೌರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ
ಎಸ್.ಪಿ.ವೇಲುಮಣಿ-ಸಾಮಾಜಿಕ ಕಾರ್ಯಕ್ರಮ ಅನುಷ್ಠಾನ
ಡಿ.ಜಯಕುಮಾರ್-ಮೀನುಗಾರಿಕೆ ಖಾತೆ
ಸಿ.ವಿ.ಷಣ್ಮುಗಂ-ಕಾನೂನು ಮತ್ತು ಬಂದೀಖಾನೆ ಖಾತೆ
ಕೆ.ಪಿ.ಅನ್ಭಳಗನ್-ಉನ್ನತ ಶಿಕ್ಷಣ ಖಾತೆ
ಡಾ.ವಿ,ಸರೋಜಾ-ಸಮಾಜ ಕಲ್ಯಾಣ ಖಾತೆ
ಎಂ.ಸಿ.ಸಂಪತ್-ಕೈಗಾರಿಕೆ ಖಾತೆ
ಕೆ.ಸಿ.ಕರುಪ್ಪನನ್-ಪರಿಸರ ಖಾತೆ
ಆರ್.ಕಾಮರಾಜ್-ಆಹಾರ ಮತ್ತು ನಾಗರಿಕ ಸರಬರಾಜು ಖಾತೆ
ಒ.ಎಸ್.ಮಣಿಯನ್-ಜವಳಿ ಖಾತೆ
ಕೆ.ರಾಧಾಕೃಷ್ಣನ್-ವಸತಿ ಮತ್ತು ನಗರಾಭಿವೃದ್ಧಿ ಖಾತೆ
ಡಾ.ಸಿ.ವಿಜಯ ಭಾಸ್ಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
ಆರ್. ದೊರೈಕಣ್ಣು-ಕೃಷಿ ಖಾತೆ
ಕದಂಬುರ್ ರಾಜು-ವಾರ್ತಾ ಮತ್ತು ಪ್ರಸಾರ ಖಾತೆ
ಎಸ್ ರಾಮಚಂದ್ರನ್-ಹಿಂದೂ ಧಾರ್ಮಿಕ ದತ್ತಿ ಖಾತೆ
ವಲರ್ಮತಿ-ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ
ಪಿ.ಬಾಲಕೃಷ್ಣ ರೆಡ್ಡಿ-ಪಶುಸಂಗೋಪನೆ ಖಾತೆ