ಇಂದು ನವರಾತ್ರಿ 8ನೇ ದಿನ

0
573

 ವಾರ್ತೆ ವಿಶೇಷ ಲೇಖನ
ಮಹಾಗೌರಿ ದೇವಿ
ನವದುರ್ಗೆಯರಲ್ಲಿ ಮಹಾಗೌರಿದ್ದು 8ನೇ ರೂಪವಾಗಿದೆ. ನವರಾತ್ರಿಯ 8ನೇ ಮಹಾಗೌರಿಯನ್ನು ಆರಾಧಿಸುತ್ತಾರೆ. ಮಹಾಗೌರಿ ಪರಮೇಶ್ವರನಿಗೆ ಶಕ್ತಿ ನೀಡಿದ ತಾಯಿಯಾಗಿದ್ದಾಳೆ. ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದಳು. ಮಹಾಗೌರಿ ಸಾಕ್ಷಾತ್ ಅದಿಶಕ್ತಿಯ ಪ್ರತಿರೂಪವಾಗಿದ್ದಾಳೆ. ವೃಷಭವಾಹನೆ ಮಹಾಗೌರಿಯ ಶಾಂತ ಸ್ವರೂಪಿಯಾಗಿದ್ದಾಳೆ. ಇವಳು ಶೈತ ವರ್ಣೆ. ಇವಳ ವಸ್ತ್ರ ಆಭರಣ ಬಿಳಿಯ ಬಣ್ಣದ್ದು. ಮಹಾಗೌರಿ ಚತುರ್ಭುಜೆ. (ಶಂಖ, ಚಂದ್ರ, ಪುಷ್ಪಧಾರಿಣಿ)ಅಭಯಮುದ್ರೆ, ತ್ರಿಶೂಲ, ಢಮರುಗ, ವರಮುದ್ರೆ ಸ್ವರೂಪದ ಈ ದೇವಿ ಅತ್ಯಂತ ಸುಂದರ. ಇವಳ ಆರಾಧನೆಯಿಂದ ಲೌಕಿಕ, ಅಲೌಕಿಕ ಸುಖ ಪ್ರಾಪ್ತಿಯಾಗಲಿದೆ. ಅಲ್ಲದೆ ಪೂರ್ವಜನ್ಮದ ಪಾಪ ಪರಿಹಾರವಾಗುತ್ತದೆ. ಈಕೆ ಅಸಾಧ್ಯವಾದ ಕಾರ್ಯಗಳನ್ನು ಸಾಧಿಸುತ್ತಾಳೆ. ಈ ತಾಯಿ ಶ್ವೇತ ವೃಷಭ ವಾಹನೆ.

ಮಹಾಗೌರಿ ದೇವಿ
ಮಹಾಗೌರಿ ದೇವಿ

ಮಂತ್ರ:
ಶ್ವೇತೇ ವೃಷೇ ಸಮಾರೂಢಾ
ಶ್ವೇತಾಂಬರ ಧರಾ ಶುಚಿಃ
ಮಹಾಗೌರೀ ಶುಭಂ
ದದ್ಯಾನ್ಮಹಾದೇವಪ್ರಮೋದದಾ
ಈಕೆ ಶೀಘ್ರ ಫಲದಾಯಿನಿ-ಮಹಾಗೌರಿ ದುಃಖ ದೂರ ಮಾಡುತ್ತಾಳೆ-ಭಕ್ತರಲ್ಲಿರುವ ಕೆಟ್ಟ ಬುದ್ಧಿಯನ್ನು ಹೋಗಲಾಡಿಸುತ್ತಾಳೆ. ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾಳೆ. ಈಕೆಯ ಕೃಪೆಯಿದ್ದರೆ ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತದೆ. ಈಕೆ ದುಷ್ಟಶಕ್ತಿಗಳನ್ನು ನಾಶ ಮಾಡುವ ದೇವತೆಯಾಗಿದ್ದಾಳೆ. ನೇರಳೆ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ

LEAVE A REPLY

Please enter your comment!
Please enter your name here