ಇಂದು ನವರಾತ್ರಿಯ 7ನೇ ದಿನ

0
398

ನವರಾತ್ರಿ ವಿಶೇಷ ಲೇಖನ
ಸರಸ್ವತಿ ದೇವಿ:/ಕಾಲರಾತ್ರಿ
ದುರ್ಗೆಯ 7ನೇ ಶಕ್ತಿಯೇ ಕಾಲರಾತ್ರಿ ಅಥವಾ ಸರಸ್ವತಿ ದೇವಿಯಾಗಿದೆ. ನವರಾತ್ರಿಯ ಏಳನೇ ದಿನ ದೇವಿಯನ್ನು ಸರಸ್ವತಿ ದೇವಿ ಹಾಗೂ ಕಾಲರಾತ್ರಿ ರೂಪದಲ್ಲಿ ಪೂಜಿಸುತ್ತಾರೆ.
ಸರಸ್ವತಿ ಕೈಗಳಲ್ಲಿ ವೀಣೆ, ಜಪಮಾಲೆ, ಪುಸ್ತಕವನ್ನು ಹಿಡಿದಿದ್ದಾಳೆ. ಈಕೆಯ ವಾಹನ ಹಂಸವಾಗಿದೆ. . ಈ ದೇವಿ ಎಲ್ಲಾ ಕಲೆಗಳ ಜ್ಞಾನ, ವಿಜ್ಞಾನಗಳ ದ್ಯೋತಕವಾಗಿದ್ದಾಳೆ.ಇದರಿಂದ ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ಮಕ್ಕಳಿಗೆ ವಿದ್ಯಾರಂಭ ಮಾಡಲು ಅತಿ ಶ್ರೇಷ್ಠವಾದ ದಿನವಾಗಿದೆ.  ಹಸಿರು ಬಣ್ಣದ ದಿರಿಸನ್ನು ಭಕ್ತರು ಈ ದಿನ ತೊಡುತ್ತಾರೆ.
nava_vaarte_sars_kala
ಈ ದಿನವನ್ನು ಕಾಳರಾತ್ರಿಯಾಗಿಯೂ ಆಚರಿಸುತ್ತಾರೆ.  ನವದುರ್ಗೆಯರಲ್ಲಿ ಕಾಲರಾತ್ರಿಯದ್ದು 7ನೇ ರೂಪವಾಗಿದೆ.  ಇವಳು ಸಾದಾ ಶುಭ ಫಲಗಳನ್ನು ನೀಡುತ್ತಾಳೆ. ಈಕೆಗೆ ಶುಭಂಕರಿ ಎಂಬ ಹೆಸರಿದೆ. ಇಂದು ಸಾಧಕರ ಮನಸ್ಸು ಸಹಸ್ರಾರ ಚಕ್ರದಲ್ಲಿ ನೆಲೆಗೊಳ್ಳುತ್ತೆ. ಈಕೆಯ ರೂಪ ಅತ್ಯಂತ ಭಯಂಕರ-ಕಾಲರಾತ್ರಿಯ ವಾಹನ ಕತ್ತೆ- ಇವರ ಶರೀರ ದಟ್ಟವಾದ ಅಂಧಕಾರದಂತೆ ಅತ್ಯಂತ ಭಯಂಕರ ರೂಪವಾಗಿದೆ.
 
 
ಈಕೆ ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು-ಕೈಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಈ ದೇವಿಗಿದೆ ಬ್ರಹ್ಮಾಂಡದಂತಹ ಮೂರುಕಣ್ಣುಗಳು. ಇವರಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತದೆ. ಇವಳ ಉಸಿರಾಟದಲ್ಲಿ ಅಗ್ನಿ ಜ್ವಾಲೆಯಿದೆ. ಇವರಳಿಗೆ ನಾಲ್ಕು ಭುಜಗಳಿದ್ದು, ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ಗ್ರಹಬಾಧೆ, ಶತ್ರುಭಯ ನಿವಾರಣೆಗೆ ಇವಳನ್ನು ಆರಾಧಿಸಬೇಕು. ಈ ದಿನ ಸಾಧಕನ ಮನಸ್ಸು ಸಹಸ್ರಾರ ಚಕ್ರದಲ್ಲಿ ನೆಲೆಯಾಗಿರುತ್ತದೆ.
ಮಂತ್ರ:
ಏಕವೇಣೀ ಜಪಾಕರ್ಣಪೂರಾ
ನಗ್ನಾ ಖರಾಸ್ಥಿತಾ
ಲಂಬೋಷ್ಠೀ ಕರ್ಣಿಕಾಕರ್ಣೀ
ತೈಲಾಭ್ಯಕ್ತ ಶರೀರಿಣೀ
ವಾಮಪಾದೋಲ್ಲ ಸಲ್ಲೋಹಲತಾ
ಕಂಟಕಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ
ಕಾಲರಾತ್ರಿರ್ಭಯಂಕರೀ
 
ಪೂಜೆ ಫಲ:
ಸಮಸ್ತಪಾಪ ನಾಶ ಮಾಡುವವಳು, ವಿಘ್ನಗಳು ದೂರ, ಪುನ್ಯಪ್ರಾಪ್ತಿ-ದುಷ್ಟ ಶಕ್ತಿಗಳ ಕಾಟ ದೂರ-ಗ್ರಹ ಬಾಧೆಗಳು ದೂರ- ಶತ್ರು ಭಯ ನಿವಾರಣೆ.

LEAVE A REPLY

Please enter your comment!
Please enter your name here