ಇಂದು ನವರಾತ್ರಿಯ 3ನೇ ದಿನ

0
539

ನವರಾತ್ರಿ ವಿಶೇಷ ಲೇಖನ:
ಇಂದು ಚಂದ್ರಘಂಟಾದೇವಿ ಆರಾಧನೆ
ಇಂದು ನವರಾತ್ರಿಯ ಮೂರನೇ ದಿನವಾಗಿದೆ. ನವರಾತ್ರಿಯ ಮೂರನೇ ದಿನ ಚಂದ್ರಘಂಟಾದೇವಿಯನ್ನು ಆರಾಧನೆ ಮಾಡಲಾಗುತ್ತದೆ.  ದುರ್ಗೆಯ ಮೂರನೇ ರೂಪವೇ ಚಂದ್ರಘಂಟಾವಾಗಿದೆ. ಇವಳ ಸ್ವರೂಪ ಅತ್ಯಂತ ಶಾಂತಿದಾಯಕವಾಗಿದೆ. ಇವಳ ಮಸ್ತಕದಲ್ಲಿ ಘಂಟೆಯಾಕಾರದ ಅರ್ಧಚಂದ್ರನಿದ್ದಾನೆ. ಸಿಂಹಾರೂಢೆಯಾದ ಇವಳ 10 ಕೈಗಳಲ್ಲೂ ಅಸ್ತ್ರಗಳಿವೆ. ಚಂದ್ರಘಂಟಾ ಶೀಘ್ರ ಫಲದಾಯಿನಿಯೆಂದೇ ಪ್ರಸಿದ್ಧಿಯಾಗಿದ್ದಾಳೆ. ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರ ಪ್ರವೇಶಿಸುತ್ತದೆ. ಇವಳ ಪಾಸನೆಯಿಂದ ಸಾಂಸಾರಿಕ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.
 

ಚಂದ್ರಘಂಟಾದೇವಿ
ಚಂದ್ರಘಂಟಾದೇವಿ

 
ಈ ದೇವಿಗೆ 10 ಭುಜಗಳಿವೆ. ಇವಿಗಳಲ್ಲಿ 5 ಭುಜ ಕಮೇಂದ್ರಿಯಗಳ ಹಾಗೂ 5 ಭುಜ ಜ್ಞಾನೇಂದ್ರಿಯಗಳ ಸಂಕೇತವಾಗಿದೆ.  ಈ ದಿನ ಬಿಳಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ.
 
 
 
ನವರಾತ್ರಿಯ 2ನೇ ದಿನ ಬ್ರಹ್ಮಚಾರಿಣಿ ದೇವಿ ಆರಾಧನೆ:
ನಿನ್ನೆ ನವರಾತ್ರಿ ಎರಡನೆಯ ದಿನವಾಗಿತ್ತು.  ನವರಾತ್ರಿಯ ಎರಡನೆಯ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯರಲ್ಲಿ ಬ್ರಹ್ಮಚಾರಿಯದ್ದು 2ನೇ ರೂಪವಾಗಿದೆ.  ನವದುರ್ಗೆಯರಲ್ಲಿ ಎರಡನೆಯವಳೇ ಬ್ರಹ್ಮಚಾರಣಿ. ಶಿವನನ್ನು ಪಡೆಯಲು ಕಠಿಣ ತಪಸ್ಸು ಮಾಡಿ ಬ್ರಹ್ಮಚಾರಿಣಿಯಾದಳು. ಇವಳಿಗೆ ತಪಶ್ವಾರಿಣಿ ಎಂಬ ಹೆಸರೂ ಕೂಡ ಇದೆ. ಇವಳ ರೂಪ ಪೂರ್ಣ ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ಬಿಳಿಸೀರೆ ಧರಿಸಿ, ಕೈಯಲ್ಲಿ ಜಪಮಾಲೆ, ಕಮಂಡಲ, ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಧರಿಸಿ, ಬ್ರಹ್ಮಚಾರಿಣಿ ರೂಪದಲ್ಲಿ ಇರುತ್ತಾಳೆ. ಇವಳ ಉಪಾಸನೆಯಿಂದ ತ್ಯಾಗ, ವೈರಾಗ್ಯ, ಸಂಯಮ ವೃದ್ಧಿಯಾಗುತ್ತದೆ. ಇಂದು ಯೋಗಿಗಳ ಮನಸ್ಸು ಸ್ವಾದಿಷ್ಟಾನ ಚಕ್ರದಲ್ಲಿ ಸ್ಥಿತವಾಗುತ್ತೆ.
ಬ್ರಹ್ಮಚಾರಿಣಿ ದೇವಿ
ಬ್ರಹ್ಮಚಾರಿಣಿ ದೇವಿ

ಈ ದೇವಿಯನ್ನು ಪೂಜೆ ಮಾಡಿದರೆ ಸ್ವಚರಿತ್ರೆಯ ಪ್ರೇರಣೆ ಮತ್ತು ಬ್ರಹ್ಮಜ್ಞಾನ ಸಿಗುತ್ತದೆ. ನವರಾತ್ರಿ ದಿನದ ಬಣ್ಣ ಕಿತ್ತಳೆಯಾಗಿದೆ. ಕಿತ್ತಳೆ ಬಣ್ಣದ ದಿರಿಸನ್ನು ನೀವು ಈ ದಿನ ತೊಟ್ಟುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here