ಸ್ಕಂದ ಮಾತೆ
ನವದುರ್ಗೆಯರಲ್ಲಿ ಈಕೆ 5 ನೇ ರೂಪವಾಗಿದೆ. ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತಾ ಸುಬ್ರಹ್ಮಣ್ಯನ ತಾಯಿಯಾಗಿದ್ದಾಳೆ.
ದೇವಿಯ ಮಡಿಲಿನಲ್ಲಿ ಆಕೆಯ ಸ್ಕಂದನಿರುತ್ತಾನೆ. ತಾರಕಾಸುರನನ್ನು ವಧಿಸಲು ಸ್ಕಂದಿಗೆ ಜನ್ಮ ನೀಡಿದಳು. ಸ್ಕಂದ ದೇವಿಯ ಬಲ ತೋಡೆ ಮೇಲೆ ವಿರಾಜಮಾನನಾಗಿದ್ದಾನೆ. ಇವಳ ಉಪಾಸನೆ ಮಾಡಿದರೆ ದೇವಿಸಹಿತ ಸ್ಕಂದನ ಕೃಪೆಯಾಗುತ್ತದೆ. ಈ ದಿನ ಸಾಧಕರ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಈಕೆಯ ಆರಾಧನೆಯಿಂದ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಈ ದೇವಿಯು ಸಾತ್ವಿಕ ಶಕ್ತಿಯ ಪ್ರತೀಕವಾಗಿದ್ದಾಳೆ. ಈ ದಿನ ನೀಲಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ನೀಲಿ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯ ಪೂಜೆಯನ್ನು ನೀವು ಮಾಡಬಹುದು.