ಇಂದು ನವರಾತ್ರಿಯ ಆರನೇ ದಿನ

0
630

 
ನವರಾ‍ತ್ರಿಯ ವಾರ್ತೆ ವಿಶೇಷ ಲೇಖನ
ಕಾತ್ಯಾಯಿನಿ ದೇವಿ:
ಕಾತ್ಯಯನ ಮಹರ್ಷಿಯ ಆರಾಧ್ಯ ದೇವಿಯಾಗಿದ್ದಾಳೆ. ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ತ್ರಿಮೂರ್ತಿಗಳ ಅಂಶವೇ ಈ ಕಾತ್ಯಾಯಿನಿ ದೇವಿಯಾಗಿದ್ದಾಳೆ.  ಕಾತ್ಯಾಯಿನಿ  ಅಂದರೆ ಪರೋಪಕಾರದ ಪ್ರತಿರೂಪ. ಕಾತ್ಯಾಯಿನಿ  ದೇವಿ ಬಂಗಾರದಂತೆ ಹೊಳೆಯುತ್ತಾಳೆ. ಈ ದೇವಿ ದುಷ್ಟ ಶಿಕ್ಷಕಿ.. ಶಿಷ್ಟ ರಕ್ಷಕಿಯಾಗಿದ್ದಾಳೆ. ಇದರಿಂದ ಇವಳ ಆರಾಧನೆಯಿಂದ ದುಷ್ಟಶಕ್ತಿಗಳು ನಾಶವಾಗುತ್ತಾರೆ.
 

ಕಾತ್ಯಾಯಿನಿ ದೇವಿ
ಕಾತ್ಯಾಯಿನಿ ದೇವಿ

 
ಈಕೆ ಕಾತ್ಯಯನ ಮಹರ್ಷಿಯ ತಪಸ್ಸಿಗೆ ಒಲಿದು, ಮಹರ್ಷಿಯ ಪುತ್ರಿಯಾಗಿ ಜನಿಸಿದವಳು. ಕಾತ್ಯಾಯನರಿಂದ ಮೊದಲ ಪೂಜೆ ಪಡೆದವಳು. ಇಂದು ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಇವಳ ಆರಾಧನೆಯಿಂದ ಧರ್ಮ, ಅರ್ಥ, ಕಾಮ, ಮೋಕ್ಷ ಪ್ರಾಪ್ತಿಯಾಗುತ್ತದೆ.
 
 
ಕಾತ್ಯಾಯಿನಿ  ಸಿಂಹವಾಹನೆ. ಇವರ ಸ್ವರೂಪ ಅತ್ಯಂತ ಭವ್ಯ. ಈಕೆ ಅಮೋಘ ಫಲಗಳನ್ನು ಕರುಣಿಸುವಳು. ಧರ್ಮ-ಅರ್ಥ-ಕಾಮ-ಮೋಕ್ಷ ಪ್ರಾಪ್ತಿಯಾಗುತ್ತದೆ. ರೋಗಗಳು ದೂರ. ಉತ್ತಮ ಪದವಿ ಪ್ರಾಪ್ತಿಯಾಗುತ್ತದೆ. ಈಕೆಯ ಪೂಜೆಯಿಂದ ಶತ್ರುಗಳ ಗುಣ ಧ್ವಂಸ, ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ.
 
 
ಈ ದೇವಿಗೆ ನಾಲ್ಕು ಭುಜಗಳು, ಅಭಯ ಹಸ್ತೆ, ವರದ ಹಸ್ತೆಯಾಗಿರುವ ಈ ದೇವಿ ಖಡ್ಗ, ಕಮಲವನ್ನು ಕೈಯಲ್ಲಿ ಹಿಡಿದಿದ್ದಾಳೆ.  ಈ ದಿನ ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಯಾಗುತ್ತದೆ. ಗೋಪಿಕೆಯರು ಕೃಷ್ಣನನ್ನು ಪಡೆಯಲು ಇವಳನ್ನು ಪೂಜಿಸಿದ್ದರು. ಈ ದೇವಿಯು ಕಾತ್ಯಾಯನ ಋಷಿಯ ತಪಸ್ಸಿನ ಫಲ ಸ್ವರೂಪವಾಗಿ ಅವರ ಪುತ್ರಿಯಾಗಿ ಪ್ರಕಟವಾದವಳು ಹಾಗೂ ಇದೇ ರೂಪದಲ್ಲಿ ದೇವಿಯು ಮಹಿಷಾಸುರನೆಂಬ ರಾಕ್ಷನನ್ನು ಸಂಹಾರ ಮಾಡಿದಳು. ಈ ದೇವಿಯು ಚೇತನಾ ಸ್ವರೂಪಳಾಗಿ, ವಿದ್ಯಮಾನಳಾಗಿದ್ದಾಳೆ. ಹಳದಿ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ. ಕಲಿಯುಗದಲ್ಲಿ ಕಾತ್ಯಾಯಿನಿ ಮೋಕ್ಷ ನೀಡುತ್ತಾಳೆ.
ಚಂದ್ರಹಾಸೋಜ್ವಲಕರಾ
ಶಾರ್ದೂಲವರವಾಹನಾ
ಕಾತ್ಯಾಯನೀ ಶುಭಂ
ದದ್ಯಾದ್ದೇವೀ ದಾನವಘಾತಿನೀ

LEAVE A REPLY

Please enter your comment!
Please enter your name here