ಇಂದು ದ್ವಿತೀಯ ವಾರ್ಷಿಕೋತ್ಸವ

0
150

ಕಾಸರಗೋಡು ಪ್ರತಿನಿಧಿ ವರದಿ
ಮುಳಿಯಾರು, ಕೋಟೂರಯ ಯಕ್ಷತೂಣೀರ ಸಂಪ್ರತಿಷ್ಠಾನ(ರಿ) ಮತ್ತು ಬೆಂಗಳೂರಿನ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ‘ದ್ವಿತೀಯ ವಾರ್ಷಿಕೋತ್ಸವ’ವು ಇಂದು ಸಂಜೆ 4 ಗಂಟೆಗೆ(ಫೆ.18) ನೆಕ್ರಂಪಾರೆ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದಲ್ಲಿರುವ ಕಾರ್ತೀಕೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
 
 
ಶ್ರೀ ಮಜ್ಜಗದ್ಗುರು ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರಾಗತ ಶ್ರೀಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ನಂತರ ಶ್ರೀಗಳು ‘ಯಕ್ಷತೂಣೀರ-2017’ಸಕಾಲಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
 
 
ಕಾಸರಗೋಡು ಪ್ರಸಾದ್ ಗ್ರೂಪ್ ಆಫ್ ಹೋಟೆಲ್ ನ ಶ್ರೀರಾಮಪ್ರಸಾದ್ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲೆಯ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರಲಿದ್ದಾರೆ.
 
 
ಸನ್ಮಾನಿಸಲ್ಪಡುವ ಗಣ್ಯರ ವಿವರ:
ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ನಾರಾಯಣ ಮಣಿಯಾಣಿ ಬೆಳ್ಳಿಗೆ
ಹಿರಿಯ ಯಕ್ಷಗಾನ ನೇಪಥ್ಯ ಕಲಾವಿದರು(ನಿವೃತ್ತರು) ಜಯ ಬಲ್ಯಾಯ ಕೂಡ್ಲು
ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿಗಳು(ನಿವೃತ್ತ) ಕೂಡ್ಲು ಆನಂದ
 
 
ಸಭಾ ಕಾರ್ಯಕ್ರಮದ ನಂತರ ಸಂಜೆ 6 ಗಂಟೆಯಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ(ರಿ.)ಇವರಿಂದ ಕಾಲಮಿತಿಯ ಯಕ್ಷಗಾನ ಬಯಲಾಟ ‘ರತಿಕಲ್ಯಾಣ’ ನಡೆಯಲಿದೆ.

LEAVE A REPLY

Please enter your comment!
Please enter your name here