ಇಂದು ಕೃಷ್ಣಾ ತೀರ್ಪು

0
272

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದು ಕೃಷ್ಣಾ ನದಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಲಿದೆ. ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಟ್ರಿಬ್ಯುನಲ್ ತೀರ್ಪು ಹೊರಬೀಳಲಿದೆ. ತೆಲಂಗಾಣಕ್ಕೆ ಹೊಸದಾಗಿ ಯೋಜನಾವಾರು ನೀರು ಹಂಚಿಕೆ ಬಗ್ಗೆ ಕೃಷ್ಣಾ ಟ್ರಿಬ್ಯುನಲ್ ವಿಚಾರಣೆ ನಡೆಯಲಿದೆ.
 
 
 
2010ರಲ್ಲಿ ಕೃಷ್ಣಾ ನ್ಯಾಯಾಧಿಕರಣ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ನಡುವೆ ನೀರು ಹಂಚಿಕೆ ಮಾಡಿದೆ. ಆದರೆ ಇದಕ್ಕೆ ಮೂರು ರಾಜ್ಯಗಳ ಮಧ್ಯೆ ಅಪಸ್ವರ ಇತ್ತು. ಹೀಗಿರುವಾಗಲೇ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯಿಸಿದ ನಂತರ ಹೊಸ ತಕರಾರು ಶುರುವಾಗಿದೆ.
 
ನಾಲ್ಕು ರಾಜ್ಯಗಳ ನಡುವೆ ಕೃಷ್ಣ ನದಿ ನೀರು ಮರುಹಂಚಿಕೆ ಮಾಡಬೇಕು ಎಂದು ತೆಲಂಗಾಣ ಅರ್ಜಿ ಸಲ್ಲಿಸಿದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.
 
 
ಆಂಧ್ರದಿಂದ ತೆಲಂಗಾಣ ಪ್ರತ್ಯೇಕವಾಗಿದೆ. ಹೀಗಾಗಿ ಆಧ್ರಪ್ರದೇಶ ರಾಜ್ಯಕ್ಕೆ ಹಂಚಿಕೆಯಾದ ನೀರಿನಲ್ಲೇ ತೆಲಂಗಾಣ ಕೂಡ ಪಾಲು ಪಡೆಯಬೇಕು ಎಂದು ಕರ್ನಾಟಕ, ಮಹಾರಾಷ್ಟ್ರದ ವಾದ.  ಈ ಸಂಬಂಧ ಇವತ್ತು ಬೆಳಗ್ಗೆ 11 ಗಂಟೆಗೆ ಕೃಷ್ಣ ನ್ಯಾಯಾಧಿಕರಣ ತೀರ್ಪು ಪ್ರಕಟಿಸಲಿದೆ.

LEAVE A REPLY

Please enter your comment!
Please enter your name here