ಇಂದು 'ಕಾವೇರಿ ಭವಿಷ್ಯ'

0
218

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಮಾರ್ಪಾಡಿಗೆ ಭಾನುವಾರ ಸುಪ್ರೀಂಕೋರ್ಟ್ ಗೆ ತುರ್ತಾಗಿ ಅರ್ಜಿ ಸಲ್ಲಿಸಲಾಗಿತ್ತು.
 
 
ಮುಖ್ಯ ನ್ಯಾ.ಟಿ.ಎಸ್.ಠಾಕೂರ್ ಸೂಚನೆಯಂತೆ ಇಂದು ತುರ್ತು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ.ದೀಪಕ್ ಮಿಶ‍್ರಾ, ನ್ಯಾ.ಉದಯ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ರಾಜ್ಯದ ಅರ್ಜಿ ವಿಚಾರಣೆ ನಡೆಯಲಿದೆ.
 
 
ಮಂಡ್ಯದ ಮುಂದುವರಿದ ಹೋರಾಟ:
ಮಂಡ್ಯದಲ್ಲಿ ಕಾವೇರಿ ಹೋರಾಟ ಇಂದೂ ಮುಂದುವರಿದಿದೆ. ಮಂಡ್ಯ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿದಿದೆ. ಕಾವೇರಿ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಕೆಆರ್ ಎಸ್ ಬಳಿಯೂ ಸುತ್ತಮುತ್ತಲ ಗ್ರಾಮದ ರೈತರಿಂದ ಪ್ರತಿಭಟನೆ ನಡೆಯಲಿದೆ.

LEAVE A REPLY

Please enter your comment!
Please enter your name here