ಇಂದು ಕಾವೇರಿ ಭವಿಷ್ಯ ನಿರ್ಧಾರ…

0
228

ರಾಷ್ಟ್ರೀಯ ಪ್ರತಿನಿಧಿ ವರದಿ
2007ರ ಕಾವೇರಿ ನ್ಯಾಯಾಧಿಕರಣ ನೀಡಿದ್ದ ಅಂತಿಮ ವಿಚಾರದ ಬಗ್ಗೆ ಕರ್ನಾಟಕ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇಂದು ಮತ್ತೆ ನಡೆಯಲಿದೆ.
 
 
 
ನಿನ್ನೆ ಸುಪ್ರೀಂನಲ್ಲಿ ನಡೆದಿದ್ದ ವಿಚಾರಣೆ ಇವತ್ತಿಗೆ ಮುಂದೂಡಲಾಗಿತ್ತು. ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಅಮಿತ್ ರಾಯ್, ಜಸ್ಟೀಸ್ ಅಜಯ್ ಮಾನಿಕರಾವ್ ಕನವಿಲ್ ಕರ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದ್ದರು. ಮೇಲ್ಮನವಿ ಅರ್ಜಿಗಳ ಸಿಂಧುತ್ವದ ಬಗ್ಗೆ ನಿನ್ನೆ ಸುದೀರ್ಘ ವಾದ ಮಂಡನೆಯಾಗಿತ್ತು.
 
 
ಅರ್ಜಿಗಳು ವಿಚಾರಣೆಗೆ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತ್ತು. ಆದರೆ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಅರ್ಜಿಗಳು ವಿಚಾರಣೆಗೆ ಯೋಗ್ಯ ಎಂದು ವಾದ ಮಾಡಿತ್ತು.
 
 
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಯೋಗ್ಯವೇ, ಅಲ್ಲವೇ ಎಂಬ ಬಗ್ಗೆ ಇಂದು ವಿಚಾರಣೆ ನಡೆಸಲಿದೆ.
ಮುಂದಿನ ಆದೇಶದವರೆಗೂ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಎರಡು ರಾಜ್ಯಗಳೂ ಸಹ ಸೌಹಾರ್ದತೆ, ಶಾಂತಿ ಕಾಪಾಡಿ. ಈ ಎಲ್ಲದರ ಬಗ್ಗೆ ಎರಡೂ ರಾಜ್ಯಗಳ ಸಿಎಂಗಳಿಗೆ ತಿಳಿಸಿ ಎಂದು ಎರಡೂ ರಾಜ್ಯಗಳ ಎಜಿಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

LEAVE A REPLY

Please enter your comment!
Please enter your name here