ಇಂದು ಅಮೂಲ್ಯ ಎಂಗೇಜ್ ಮೆಂಟ್

0
4139

ಸಿನಿ ಪ್ರತಿನಿಧಿ ವರದಿ
ಚೆಲುವಿನ ಚಿತ್ತಾರದ ಬೆಡಗಿಗೆ ಇಂದು ನಿಶ್ಚಿತಾರ್ಥದ ಸಂಭ್ರಮ. ನಿಶ್ಚಿತಾರ್ಥದ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ. ನಿಶ್ಚಿತಾರ್ಥಕ್ಕೆ ಜಗದೀಶ್ ಅವರು ಭರ್ಜರಿ ಉಡುಗೊರೆ ಕೊಟ್ಟಿದ್ದಾರೆ.
 
ಶಿಲ್ಪಾ ಗಣೇಶ ಅವರು ರೇಷ್ಮೆ ಸೀರೆ ಸೆಲೆಕ್ಟ್ ಮಾಡಿದ್ದಾರೆ. ಎಂಗೇಜ್ ಮೆಂಟ್ ನಲ್ಲಿ ಅಮೂಲ್ಯ ಅವರು ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿದ್ದಾರೆ. ಇಂಡೋ ಏಷ್ಯನ್ ಸ್ಟೈಲ್ ನಲ್ಲಿ ಜನದೀಶ್ ಬರಲಿದ್ದಾರೆ. ಮೇ ತಿಂಗಳಲ್ಲಿ ಅಮೂಲ್ಯ-ಜಗದೀಶ್ ವಿವಾಹ ನಡೆಯಲಿದೆ.
 
 
 
ಬೆಳಗ್ಗೆ ವಿವಿಧ ಪೂಜೆ ನಡೆದಿದ್ದು, ಮಧ್ಯಾಹ್ನದ ನಂತರ ಮೈಸೂರು ರಸ್ತೆಯ ಕಂಗೇರಿಯಲ್ಲಿರುವ ಶ್ರೀ ಸಾಯಿ ಪ್ಯಾಲೇಸ್ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ ನಡೆದಿದೆ. ಅತಿಥಿಗಳಿಗಾಗಿ ಇಂದು ಮಧ್ಯಾಹ್ನಕ್ಕೆ 3000 ಮಂದಿಗೆ ಭೂರೀ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿನಕಾಯಿ, ಕಟ್ ಫ್ರೂಟ್ಸ್, ಐಸ್ ಕ್ರೀಮ್, ಅನ್ನ, ರಸಂ, ಮೊಸರನ್ನ, ಹಪ್ಪಳ, ಸೆಂಡಿಗೆ, ಗಾರ್ಲಿಕ್ ಚೀಸ್ ಮಂಚೂರಿ, ವೆಜ್ ಸ್ಪ್ರಿಂಗ್ ರೋಲ್, ಫ್ರೈಡ್ ರೈಸ್, ವೆಜ್ ತಾವಾ ಫ್ರೈ, ಗೀರೈಸ್, ಜೀರಾರೈಸ್, ಕಾರ್ನ್ ಪನ್ನೀರ್, ಬಾಂಬೆ ಸಾಗು, ವೆಜ್ ಶಾಹಿ ಕುರ್ಮಾ, ಪ್ಲೇನ್ ಅಕ್ಕಿರೊಟ್ಟಿ, ಹಿದುಕಿಬೇಳೆ ಗೊಜ್ಜು, ಮಿನಿ ಮಸಾಲೆ ದೋಸೆ, ಆಪಮ್, ಇಡ್ಲಿ, ವೆಲ್ ಕಲ್ ಜ್ಯೂಸ್, ವೆಲ್ ಕಮ್ ಸ್ಟಾರ್ಟರ್ಸ್ ಸೇರಿ ವಿವಿಧ ಐಟಮ್ ಗಳು ಇದ್ದವು.
ಕಳೆದ ಶಿವರಾತ್ರಿ ವೇಳೆ ಅಮೂಲ್ಯ ಮತ್ತು ಜಗದೀಶ್ ಇಬ್ಬರ ಕುಟುಂಬದವರು ಮದುವೆ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದರು.

LEAVE A REPLY

Please enter your comment!
Please enter your name here