ಇಂದಿನಿಂದ ಸಿಐಡಿ ತನಿಖೆ ಶುರು

0
197

ಮಡಿಕೇರಿ ಪ್ರತಿನಿಧಿ ವರದಿ
ಮಡಿಕೇರಿಯಲ್ಲಿ ಡಿವೈಎಸ್ ಪಿ ಎಂ ಕೆ ಗಣಪತಿ ಆತ್ಮಹತ್ಯೆ ಕೇಸ್ ತನಿಖೆ ಹಂತದಲ್ಲಿದೆ. ಇಂದಿನಿಂದ ಸಿಐಡಿ ತನಿಖೆ ಆರಂಭವಾಗಲಿದೆ. ಮಡಿಕೇರಿ ನಗರದಲ್ಲೇ ಸಿಐಡಿ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ.
 
 
ಸಿಐಡಿ ಡಿಐಜಿ ಹೇಮಂತ್ ನಿಂಬಾಳ್ಕರ್ ನೇತೃತ್ವದ ತಂಡ ಮಡಿಕೇರಿಯಲ್ಲಿ ಗಣಪತಿ ಆತ್ಮಹತ್ಯೆ ಬಗ್ಗೆ ತನಿಖೆ ಆರಂಭಿಸಿದೆ. ನಿನ್ನೆ ಗಣಪತಿ ಅಂತ್ಯಸಂಸ್ಕಾರದಲ್ಲೂ ಸಿಐಡಿ ತಂಡ ಭಾಗವಹಿಸಿತ್ತು. ಆದರೆ ನಿನ್ನೆ ಯಾವುದೇ-ಯಾರನ್ನೂ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಇಂದು ಮತ್ತೆ ಸಿಐಡಿ ತಂಡ ರಂಗಸಮುದ್ರಕ್ಕೆ ಭೇಟಿ ನೀಡಲಿದೆ. ಮಡಿಕೇರಿಯಲ್ಲಿ ಗಣಪತಿ ತಿರುಗಾಡುತ್ತಿದ್ದ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ.
 
 
ಎಸ್ಪಿ ಕುಮಾರಸ್ವಾಮಿ ಸೇರಿ ಇತರೆ ಅ‍ಧಿಕಾರಿಗಳ ತಂಡ ಮಡಿಕೇರಿ ನಗರ ಠಾಣೆಗೆ ಭೇಟಿ ನೀಡುವ ಸಾಧ್ಯತೆ ಇದೆ. ನಿನ್ನೆ ಎಸ್ಪಿ ತಂಡ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗಸಮುದ್ರಕ್ಕೆ ಭೇಟಿ ನೀಡಿತ್ತು.

LEAVE A REPLY

Please enter your comment!
Please enter your name here