ಇಂದಿನಿಂದ ಶೃಂಗಸಭೆ ಆರಂಭ

0
559

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಇಂದಿನಿಂದ ತಾಷ್ಕೆಂಟ್ ನಲ್ಲಿ 2 ದಿನಗಳ ಎಸ್ ಸಿಒ ಶೃಂಗಸಭೆ ನಡೆಯಲಿದೆ. ಉಜ್ಬೆಕಿಸ್ತಾನ ರಾಜಧಾನಿ ತಾಷ್ಕೆಂಟ್ ನಲ್ಲಿ ಎಸ್ ಸಿಒ ಶೃಂಗಸಭೆ ನಡೆಯಲಿದೆ.
 
 
 
ಎಸ್ ಸಿಒ ಶೃಂಗಸಭೆ 6 ರಾಷ್ಟ್ರಗಳ ಶಾಂಘೈ ಸಹಕಾರ ಸಂಘಟನೆಯಾಗಿದೆ. ಎಸಿ ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಲಿದ್ದು, ಚರ್ಚಿಸಲಿದ್ದಾರೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾದ ಸಹಕಾರ ಕೋರುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರ ಸಹಕಾರ ಕೋರುವ ಸಾಧ್ಯತೆ ಇದೆ.
 
 
ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು, ಭಾರತ ಮತ್ತು ಪಾಕಿಸ್ತಾನಕ್ಕೆ ಒಕ್ಕೂಟದ ಸದಸ್ಯತ್ವ ನೀಡುವ ಸಂಬಂಧ ಎನ್​ಎಸ್​ಜಿ  ಸದಸ್ಯರು ಮೂರು ಸುತ್ತಿನ ಅನಧಿಕೃತ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here