ಇಂದಿನಿಂದ ಪಟ್ರೋಲ್ ಖರೀದಿಯಲ್ಲಿ ರಿಯಾಯಿತಿ ದರ ಜಾರಿ

0
394

ರಾಷ್ಟ್ರೀಯ ಪ್ರತಿನಿಧಿ ವರದಿ
ಕ್ಯಾಶ್ ಲೆಸ್ ವ್ಯವಾರಕ್ಕೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ರಿಯಾಯಿತಿ ನೀಡುವ ನೂತನ ಸೇವೆಗಳು ಮಂಗಳವಾರದಿಂದಲೇ ಜಾರಿಯಾಗಿದೆ.
 
 
 
ವಾಹನಗಳಿಗೆ ಪೆಟ್ರೋಲ್ ಖರೀದಿ ಮಾಡುವಾಗ ಕಾರ್ಡ್ ಅಥವಾ ಮೊಬೈಲ್/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದರೆ 0.75ರಷ್ಟು ರಿಯಾಯಿತಿ ದೊರೆಯಲಿದೆ. ಈ ನೂತನ ಯೋಜನೆಯನ್ನು ಇಂದಿನಿಂದಲೇ ಜಾರಿಗೊಳಿಸಲಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ ಇಂದಿನಿಂದಲೇ ಜಾರಿಗೊಳಿಸುತ್ತಿದೆ.
 
 
 
ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡುವ ಗ್ರಾಹಕರ ಖಾತೆಗೆ ನೇರವಾಗಿ ರಿಯಾಯಿತಿ ಹಣವನ್ನು 3 ದಿನಗಳಲ್ಲಿ ಹಿಂದಿರುಗಿಸಲಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ ಹೇಳಿದೆ.

LEAVE A REPLY

Please enter your comment!
Please enter your name here