ಸಿನಿ ಪ್ರತಿನಿಧಿ ವರದಿ
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ನಾಗರಹಾವು ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.
ನಟ ವಿಷ್ಣುವರ್ದನ್ ಅವರ 201ನೇ ಚಿತ್ರಮಂದಿರ ಅಂತಾನೇ ಬಿಂಬಿತವಾಗಿರೋ ಈ ಸಿನಿಮಾದಲ್ಲಿ ರಮ್ಯಾ, ದರ್ಶನ್, ದಿಗಂತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನ ಡಿಜಿಟಲ್ ಹೆಡ್ ರೀಪ್ಲೇಸ್ಮೆಂಟ್ ಟೆಕ್ನಾಲಜಿ ಬಳಸಿ ಗ್ರಾಫಿಕ್ಸ್ ನಲ್ಲಿ ರೀ ಕ್ರಿಯೇಟ್ ಮಾಡಲಾಗಿದೆ.
ತೆಲುಗು ಚಿತ್ರ ‘ಅರುಂಧತಿ’ ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ.
35 ಕೊಟಿ ರೂ. ವೆಚ್ಚದಲ್ಲಿ ನಾಗರಹಾವು ಚಿತ್ರ ಮೂಡಿಬಂದಿದೆ. ಸಾಜೀದ್ ಖುರೇಷಿ ನಿರ್ಮಾಣದ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಎರಡು ಸಾವಿರ ಬೆಳ್ಳಿಪರದೆ ಮೇಲೆ ನಾಗರಹಾವು ಬುಸುಗುಡುತ್ತಿದೆ.