ಇಂದಿನಿಂದ ನವರಾತ್ರಿ ಪ್ರಾರಂಭ

0
716

 
ವಿಶೇಷ ಲೇಖನ
ಇಂದಿನಿಂದ ನವರಾತ್ರಿ ಮಹೋತ್ಸವ ಆರಂಭವಾಗಿದೆ. ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬವಾಗಿದೆ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹವಾಗಿದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇ ದಿನವೇ ವಿಜಯ ದಶಮಿ ಅಥವಾ ದಸರಾ ಹಬ್ಬವಾಗಿದೆ. ಆಶ್ವೀಜ ಮಾಸದ ಶುಕ್ಲಪಕ್ಷದ ಪಾಡ್ಯ ದಿನದಿಂದ(ಅ.1ರಿಂದ) ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂದೂ ಕರೆಯುತ್ತಾರೆ.
 
 
ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.
 
ನವರಾತ್ರಿಯ 9 ದಿನಗಳಲ್ಲಿ ನವ ದೇವಿಯರ ಆರಾಧನೆ:

  1. ಶೈಲ ಪುತ್ರಿ-ಪಾಡ್ಯ
  2. ಬ್ರಹ್ಮಚಾರಿಣಿ-ಬಿದಿಗೆ
  3. ಚಂದ್ರಘಂಟಾ-ತದಿಗೆ
  4. ಕೂಷ್ಮಾಂಡ-ಚತುರ್ದಶಿ
  5. ಸ್ಕಂದ-ಪಂಚಮಿ
  6. ಕಾತ್ಯಾಯಿನಿ-ಷಷ್ಠಿ
  7. ಸರಸ್ವತಿ-ಸಪ್ತಮಿ
  8. ದುರ್ಗಾ -ಅಷ್ಟಮಿ
  9. ಮಹಾಗೌರಿ-ಮಹಾನವಮಿ

LEAVE A REPLY

Please enter your comment!
Please enter your name here