ಇಂದಿಗೂ ಕುಂಬಳೆಯಲ್ಲಿದೆ ತೀರ್ಥ ಬಾವಿ!!!

0
1070

ನಿತ್ಯ ಅಂಕಣ: ೪೪

ಕೇರಳದ ಕಣ್ಣಾನ್ನೂರು ಇಲ್ಲಿಯೂ ನಿತ್ಯಾನಂದ ಸ್ವಾಮಿಗಳು ಮೊಕ್ಕಾಂ ಇದ್ದು ಒಂದಿಷ್ಟು ದಿನಗಳನ್ನು ಕಳೆಯುತ್ತಾರೆ. ನಾಗರಿಕ ಸಮಾಜ ಎಂದ ಮೇಲೆ ಸಜ್ಜನರು- ದುರ್ಜನರು ಇದ್ದೇ ಇರುತ್ತಾರೆ. ಇಲ್ಲಿ ನಿತ್ಯಾನಂದರು ಸಂಚಾರದಲ್ಲಿ ಇರುವಾಗ ಕ್ರೂರ ವಿಘ್ನ ಸಂತೋಷಿಗಳಿಂದ ಆಕ್ರಮಣಕ್ಕೆ ಒಳಗಾಗುತ್ತಾರೆ. ಕ್ರೂರಿಗಳ ಕೂಟದಲ್ಲಿದ್ದ ಒಬ್ಬ ದುಷ್ಟನು, ಸೆಣಬಿನ ಚೀಲವನ್ನು ಸೀಮೆ ಎಣ್ಣೆಯಲ್ಲಿ ಚಂಡಿಗೊಳಿಸುತ್ತಾನೆ. ಅದನ್ನು ನಿತ್ಯಾನಂದರ ಎಡ ಕೈಗೆ ಸುರುಳಿಯಾಗಿ ಸುತ್ತುತ್ತಾನೆ. ನಂತರ ಅದಕ್ಕೆ ಬೆಂಕಿ ನೀಡುತ್ತಾನೆ. ನಿತ್ಯಾನಂದರ ಕೈಯು ದೊಂಧಿಯಂತೆ ಹೊತ್ತಿ ಉರಿಯುತ್ತದೆ. ಆ ಅಗ್ನಿ ಜ್ವಾಲೆಯ ಪ್ರಖರತೆಗೆ ಅವರು ನೋವು ತಾಳಲಾರದೆ ಬೊಬ್ಬಿಡ ಬೇಕಿತ್ತು..! ಆದರೆ ನಿತ್ಯಾನಂದರು ಅವರತ್ತ ನೋಡಿ ನಗುತಿದ್ದರು. ವಿಘ್ನ ಸಂತೋಷಿಗಳು ಚಪ್ಪಾಳೆ ತಟ್ಟಿ ಕುಣಿದಾಡುತ್ತ ವಿಕೃತ ಸಂತೋಷ ಅನುಭವಿಸುತ್ತಿದ್ದರು. ಇವರ ಹುಚ್ಚಾಟ ನೋಡಿಯೇ ನಿತ್ಯಾನಂದರು ನಕ್ಕಿದ್ದು ಇರಬೇಕು. ಸ್ವಲ್ಪ ಹೊತ್ತಲ್ಲಿ ನಿತ್ಯಾನಂದರು ಅಗ್ನಿಶಾಖದ ಉರಿಯ ವೇದನೆಯನ್ನು ಬೆಂಕಿ ಹಚ್ಚಿಸಿದ ಎಲ್ಲರಿಗೂ ತಮ್ಮ ಶಕ್ತಿಯಿಂದ ರವಾನಿಸಿದರು. ತಾವು ಉರಿಯುತ್ತಿರುವ ಬೆಂಕಿಯನ್ನು ನಂದಿಸಿಕೊಂಡರು. ವಿಘ್ನ ಸಂತೋಷಿ ಪುಂಡರ ತಂಡದವರೆಲ್ಲರು ಅಗ್ನಿ ಜ್ವಾಲೆಯ ನೋವು ತಾಳಲಾರದೆ ಬೊಬ್ಬಿಡುತ್ತ ಕುಣಿಯಲು ಆರಂಭಿಸಿದರು. ಎಲ್ಲರಿಗೂ ತಾವು ಮಾಡಿರುವ ಘನಘೋರವಾದ ತಪ್ಪಿನ ಅರಿವಾಯಿತು. ಕ್ಷಮೆಯಾಚಿಸಿ ಎಲ್ಲರೂ ನಿತ್ಯಾನಂದರ ಕಾಲಿಗೆರಗಿದರು. ಅಲ್ಲಿಂದ ಅವರು ಸರಿದಾರಿಗೆ ಬರುವ ಪಾಠವನ್ನು ಕಲಿಯುತ್ತಾರೆ.

ಹಾಗೆಯೇ ನಿತ್ಯಾನಂದ ಸ್ವಾಮಿಗಳು ಕಣ್ಣಾನ್ನೂರಿನಿಂದ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸುತ್ತಾರೆ. ಪಯ್ಯನ್ನೂರು, ನೀಲೇಶ್ವರ, ಕಾಂಞಂಗಾಡ್, ಕಾಸರಗೋಡು ಮೊದಲಾದ ಊರುಗಳಲ್ಲಿ ಮೊಕ್ಕಾಂನಲ್ಲಿದ್ದು, ಅಲ್ಲಿಯೂ ನಿತ್ಯಾನಂದರು ಲೀಲೆಗಳನ್ನು ತೋರ್ಪಡಿಸುತ್ತಾರೆ. ಮುಂದೆ ಅವರು ಕುಂಬಳೆಗೆ ಬಂದು ಠಿಕಾಣಿ ಹೂಡುತ್ತಾರೆ. ಕುಂಬ್ಳೆಯಲ್ಲಿ ಅವರು ಹೆಚ್ಚಾಗಿ ರೈಲು ನಿಲ್ದಾಣ ಸನಿಹ ಇರುವ ಮರಗಳ ಕೆಳಗೆ ದಿನಗಳ ಕಳೆಯುತ್ತಿದ್ದರು. ಅವರಲ್ಲಿಗೆ, ಊರ ಪರವೂರ ಭಕ್ತರು ಬಂದು ದರ್ಶನ ಪಡೆಯುತ್ತಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ನೆರವಾಗುವ ಕೆಲಸಗಳನ್ನು ನಿತ್ಯಾನಂದರು ಮಾಡುತ್ತಿದ್ದರು. ಅದರಂತೆ ಅಲ್ಲಿಯ ಜನರು ಕುಡಿಯುವ ನೀರಿಗಾಗಿ ಪರದಾಡುವುದನ್ನು ಕಂಡು, ಬಾವಿಯೊಂದು ನಿರ್ಮಿಸಲು ನಿರ್ಧರಿಸುತ್ತಾರೆ. ನಿತ್ಯಾನಂದರು ರಾಯಪ್ಪನ್ ಮೇಸ್ತ್ರಿ ಎಂಬುವುರಿಗೆ ಬಾವಿ ತೋಡುವ ಉಸ್ತುವಾರಿ ವಹಿಸಿಕೋಡುತ್ತಾರೆ. ಗುರುಗಳ ಆದೇಶದಂತೆ ಆಳುಗಳನ್ನು ಸೇರಿಸಿಕೊಂಡು, ರಾಯಪ್ಪನ್ ಮೇಸ್ತ್ರಿ ಬಾವಿ ಅಗೆಯಲು ಪ್ರಾರಂಭಿಸುತ್ತಾನೆ. ಹಲವಾರು ದಿನಗಳ ಕಾಮಗಾರಿಯೂ ಶ್ರಮದಿಂದ ನಡೆಯುತ್ತದೆ. ಭೂಮಿಯ ಆಳ ತಲುಪಿದರು ನೀರು ಬರುವ ಲಕ್ಷಣಗಳು ಅವರಿಗೆ ಕಾಣುವುದಿಲ್ಲ. ರಾಯಪ್ಪನ್ ಅವರು ಬೇಸರ ಪಡುತ್ತಾರೆ. ಜನರ ಹಿತಕ್ಕಾಗಿ ನಿತ್ಯಾನಂದರು ಮಾಡಿಸುವ ಸತ್ಕಾರ್ಯವು ಸಫಲತೆ ಪಡೆಯುದಿಲ್ಲವಲ್ಲ..! ಎಂದು ನೊಂದು ಕೊಳ್ಳುತ್ತಾರೆ. ಬರಡು ಬಾವಿ ಹಾಗೆ ಬಿಟ್ಟು ಬಿಟ್ಟರೆ ಅಪಾಯಗಳಿಗೆ ಆಹ್ವಾನ ನೀಡುತ್ತದೆ ಎನ್ನುವ ಭಯವು ರಾಯಪ್ಪನ್ ಅವರಿಗೆ ಕಾಡುತ್ತದೆ.

ಅಲ್ಲಿಯ ಕಿಡಿಗೇಡಿಗಳ ತಂಡವೊಂದು ಬರಡು ಬಾವಿಯನ್ನು ನೋಡಿ ನಿತ್ಯಾನಂದ ಸ್ವಾಮಿಗಳನ್ನು ವ್ಯಂಗ್ಯವಾಗಿ ಅಣಕಿಸಲು ಪ್ರಾರಂಭಿಸುತ್ತಾರೆ. ಇನ್ನು ಕೆಲವು ಬುದ್ದಿ ಕೆಟ್ಟವರು ಬಾವಿ ತೋಡಿದ ಜಾಗದಲ್ಲಿ ಶೌಚಾದಿಗಳನ್ನು ಮಾಡಿ ಕಾರ್ಮಿಕರ ಶ್ರಮ ಮತ್ತು ಸಹನೆಯನ್ನು ಕೆಣಕಿದ್ದರು. ಕಿಡಿಗೇಡಿಗಳ ಉಪಟಳ ಸಹಿಸಲಾರದೆ ರಾಯಪ್ಪನ್ ಮೇಸ್ತ್ರಿ ಅವರು ನಿತ್ಯಾನಂದರಲ್ಲಿ ನೋವನ್ನು ಹೇಳಿಕೊಳ್ಳಲು ತಿರ್ಮಾನಿಸುತ್ತಾರೆ. ಅದರಂತೆ ನಿತ್ಯಾನಂದ ಸ್ವಾಮಿಗಳಿರುವ ಮರದಡೆಗೆ ತೆರಳುತ್ತಾರೆ. ಅಲ್ಲಿ ಮರದಡಿಯಲ್ಲಿ ಕೌಪೀನಧಾರಿಯಾಗಿ ವಿಶ್ರಮಿಸುತ್ತಿದ್ದ ಸ್ವಾಮಿಗಳಲ್ಲಿ ಎದುರಾದ ಸಂಕಷ್ಟಗಳನ್ನು ಹೇಳುತ್ತಾರೆ. “ಸ್ವಾಮೀಜಿ, ಬಾವಿ ಮಣ್ಣು ಅಗೆದು ತೆಗೆದು ಸಾಕಾಗಿದೆ. ನೀರು ಬರುವ ಮೂನ್ಸೂಚನೆ ಸಿಗುತ್ತಿಲ್ಲ. ನೀರು ಬರುತ್ತದೆ ಎಂಬ ನಂಬಿಕೆಯನ್ನು ಕಳೆದು ಕೊಂಡಿದ್ದೇವೆ. ಅದಲ್ಲದೆ ಜನರು ಬಾವಿನೋಡಲು ಗುಂಪು ಸೇರುತ್ತಿದ್ದಾರೆ. ಬಂದವರು ಸುಮ್ಮನಿರುವುದಿಲ್ಲ.. ಅಪಹಾಸ್ಯ ಮಾಡುವುದಲ್ಲದೆ ಉಪಟಳವನ್ನು ನೀಡುತ್ತಿದ್ದಾರೆ”. ಹೀಗೆಂದು ರಾಯಪ್ಪನ್ ಅಳಲು ಹೇಳಿಕೊಳ್ಳುತ್ತಾನೆ. ಮೇಸ್ತ್ರಿಯ ನೊಂದು ಆಡಿದ ಮಾತು ಆಲಿಸಿದ ನಿತ್ಯಾನಂದರು, ಆತನ ಸಮಾಧಾನ ಪಡಿಸುತ್ತಾರೆ. “ಯಾವುದಕ್ಕೂ ನಿರಾಶೆಗೊಳ್ಳಬೇಡ. ತಾಳ್ಮೆಯಿಂದ ಇರು. ನಾಳೆ ಎಲ್ಲವೂ ಸರಿಯಾಗುತ್ತದೆ”. ಎಂದು ನಿತ್ಯಾನಂದರು ಅಭಯ ನೀಡಿ ಕಳಿಸುತ್ತಾರೆ.

ಅದೇ ದಿನ ರಾತ್ರಿ ನಭೋಮಂಡಲದಲ್ಲಿ ಗುಡುಗು ಮಿಂಚು ಪ್ರಾರಂಭವಾಗುತ್ತದೆ. ಜೋರಾಗಿ ಮಳೆಯು ಸುರಿಯುತ್ತದೆ. ಬಾವಿ ತುಂಬ ನೀರು ತುಂಬುತ್ತದೆ. ಮಳೆ ಬಂದದ್ದು ಮಳೆಗಾಲದ ಸಮಯ ಅಲ್ಲ. ಡಿಸಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಅದು. ಮುಂಜಾನೆ ಬೇಗ ಬಾವಿಯಡೆಗೆ ಹೋದ ರಾಯಪ್ಪನ್ ಮೇಸ್ತ್ರಿ, ಬಾವಿಯನ್ನು ಇಣುಕಿ ನೋಡಿ, ನೀರು ಬಂದಿರುವುದು ಖಾತ್ರಿ ಪಡಿಸಿಕೊಳ್ಳುತ್ತಾನೆ. ನಿತ್ಯಾನಂದ ಸ್ವಾಮಿಗಳಿಗೆ ವಿಷಯ ತಿಳಿಸಲು ಅವರಿದ್ದಲ್ಲಿಗೆ ತೆರಳುತ್ತಾನೆ. “ಸ್ವಾಮೀಜಿ, ಬಾವಿ ತೋಡಿಸಿದವರು ನೀವೇ, ನೀರು ತುಂಬಿಸಿದವರೂ ನೀವೇ, ‘ನಾನು ಮಾತ್ರ ಅಹಂಕಾರದ ನೆಪ’ ಎಂದು ಮೇಸ್ತ್ರಿ ಗುರುದೇವರಲ್ಲಿ ಹೇಳಿಕೊಳ್ಳುತ್ತಾನೆ. ಆಗ ಗುರುದೇವರು ನಿನಗೆ ಮನ ತೃಪ್ತಿ ಆಗುವಷ್ಟು ನೀರಿದೆಯಾ..? ಅದು ಇನ್ನು ಮುಂದೆ ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ. ಅದೊಂದು ತೀರ್ಥ ಎಂದು ಹೇಳುತ್ತಾರೆ. ಈ ಬಾವಿ ಈಗಲೂ ಕುಂಬಳೆಯಲ್ಲಿ ಇದೆ. 1928 ರಲ್ಲಿ ಈ ಘಟನೆ ನಡೆದಿರುವುದು.

Advertisement

-ತಾರಾನಾಥ್‌ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here