ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಸಿಸ್ ದಾಳಿಗೆ ಭಾರತೀಯ ಬ್ಯಾಟ್ಸ್ ಮ್ಯಾನ್ ಗಳು ಕುಸಿದಿದ್ದಾರೆ.
189 ರನ್ ಗೆ ವಿರಾಟ್ ಕೊಹ್ಲಿ ಬಾಯ್ಸ್ ಆಲ್ ಔಟ್ ಆಗಿದ್ದಾರೆ. ಟೀಂ ಇಂಡಿಯಾಕ್ಕೆ ಆಸರೆಯಾದ ಕನ್ನಡಿಗ ಕೆ.ಎಲ್. ರಾಹುಲ್ 90 ರನ್ ಗಳಿಸಿ ಔಟಾಗಿದ್ದಾರೆ.
ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲ್ಯಾನ್ 7 ವಿಕೆಟ್ ಕಬಳಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಫಲವಾಗಿದೆ. ಕೇವಲ 12 ರನ್ ಗೆ ಕೊಹ್ಲಿ ಔಟಾಗಿದ್ದರು. ಇನ್ನು ಮುಕುಂದ್ ಡಕೌಟ್, ಪೂಜಾರ 17 ರನ್ ಗಳಿಸಿ ಔಟ್ ಆಗಿದ್ದರು. ಮೊದಲು ನೆಲಕಚ್ಚಿದ ಟೀಂ ಇಂಡಿಯಾಕ್ಕೆ ನಂತರ ಬಂದಿ ಕನ್ನಡಿಗ ರಾಹುಲ್ ಆಸರೆಯಾಗಿದ್ದು, ಕೊನೆಗೆ 90 ರನ್ ಗಳಿಸಿ ಔಟ್ ಆಗಿದ್ದಾರೆ.