ಇಂಡಿಯಾಕ್ಕೆ ಐತಿಹಾಸಿಕ ಜಯ

0
499

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಚೆನ್ನೈನ ಚೆಪಾಕ್ ಸ್ಟೇಡಿಯಂ ನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ 4-0 ಅಂತರದಿಂದ ಸರಣಿಗೆದ್ದುಕೊಂಡಿದೆ.
 
 
 
 
ಭಾರತಕ್ಕೆ ಇನ್ನಿಂಗ್ಸ್, 75 ರನ್ ಗಳ ಅಮೋಘ ಜಯಭೇರಿ ದೊರಕಿದೆ. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 759 ರನ್ ಗಳಿಸಿದ್ದು, ಇಂಗ್ಲೆಂಡ್ 447 ರನ್ ಗಳಿಗೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 207 ರನ್ ಗಳಿಗೆ ಆಲೌಟ್ ಆಗಿದೆ.
 
 
 
ಇದರಿಂದ ವಿರಾಟ್ ಕೊಹ್ಲಿ ಐದು ಟೆಸ್ಟ್ ಸರಣಿ ಗೆದ್ದ ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 
 
ಕೊಹ್ಲಿ ಬೌಲರ್ಸ್ ಒಂದೇ ದಿನದಲ್ಲಿ 10 ವಿಕೆಟ್ ಪಡೆದಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 7, ಮಿಶ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಗೆ ತಲಾ 1 ವಿಕೆಟ್ ಲಭಿಸಿದೆ.
 
 
ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡಗ ಪರ ಕುಕ್ 49, ಜೆನ್ನಿಂಗ್ಸ್ 54, ರೋಟ್ 6, ಅಲಿ 44, ಬ್ಯಾರಿಸ್ಟೊ 1, ಸ್ಟೋಕ್ಸ್ 23, ಬಟ್ಲರ್ 6, ರಶೀದ್ 2, ಬ್ರಾಡ್ 1 ರನ್ ಗಳಿಸಿದ್ದಾರೆ.
 

LEAVE A REPLY

Please enter your comment!
Please enter your name here