ಇಂಡಿಗೋದಲ್ಲಿ ಸ್ಮಾರ್ಟ್ ಫೋನ್ ಸ್ಫೋಟ

0
186

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂಡಿಗೋ ವಿಮಾನದೊಳಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2 ಸ್ಮಾರ್ಟ್ ಫೋನ್ ಗೆ ಬೆಂಕಿಬಿದ್ದು ಸ್ಫೋಟಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಸಿಂಗಾಪೂರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ 6ಇ-054 ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ
 
 
ಇಂಡಿಗೋ ವಿಮಾನ ಚೆನ್ನೈನಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿಮಾನದಲ್ಲಿನ ಪ್ರಯಾಣಿಕರು ಸುರಕ್ಷಿತರಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
 
 
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇಂದು ಬೆಳಗ್ಗೆ ಕ್ಯಾಬಿನ್ ನಿಂದ ಹೊಗೆಯ ವಾಸನೆ ಬರುತ್ತಿದ್ದುದನ್ನು ಗಮನಿಸಿದರು. ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಗೆ ತಕ್ಷಣವೇ ತಿಳಿಸಿದರು. ಸಿಬ್ಬಂದಿ ತಪಾಸಣೆ ನಡೆಸಿದಾಗ 23ಸಿ ಸೀಟಿನಿಂದ ಹೊಗೆ ಬರುತ್ತಿದ್ದು, ಕೂಡಲೇ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಗೆ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದ ಬೇರೆ ಸೀಟುಗಳಿಗೆ ಪ್ರಯಾಣಿಕರನ್ನು ಕಳುಹಿಸಲಾಯಿತು. ತಪಾಸಣೆ ಮಾಡಿದಾಗ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿದ್ದ ಸ್ಯಾಮ್ ಸಂಗ್ 2 ಮೊಬೈಲ್ ಸೆಟ್ ಒಡೆದು ಬರುತ್ತಿರುವ ಹೊಗೆ ಎಂದು ಗೊತ್ತಾಗಿದೆ.
 
 
ಈ ಘಟನೆಯಿಂದಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2 ಸರಣಿಯ ಮೊಬೈಲ್ ಸೆಟ್ ನ್ನು ವಿಮಾನದೊಳಗೆ ಬಳಸದಂತೆ ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು ಸೂಚನೆ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here