ಇಂಟರ್ಯಾಟ್ ಕ್ಲಬ್- ಪದಗ್ರಹಣ ಸಮಾರಂಭ

0
534

ವರದಿ: ಸುನೀಲ್ ಬೇಕಲ್
ಶ್ರೀ.ಧ.ಮಂ.ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಇಂಟರ್ಯಾಟ್ ಕ್ಲಬ್ ನ ವತಿಯಿಂದ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
 
 
ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ರೋ| ಅಧ್ಯಕ್ಷರಾದಂತಹ ಡಿ.ಎಂ.ಗೌಡ ಇವರು ಆಗಮಿಸಿದ್ದರು. ಇವರು ವಿದ್ಯಾರ್ಥಿಗಳು ತಮ್ಮ ಯೋಜನೆಗಳನ್ನು ಯಾವರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವಾರ್ಷಿಕ ಯೋಜನೆಯನ್ನು ನೋಡಿ ಸಂತಸಗೊಂಡರು.
 
ಆದಿತ್ಯ ನಿರೂಪಿಸಲ್ಪಟ್ಟ ಸದರಿ ಕಾರ್ಯಕ್ರಮದಲ್ಲಿ ಸುಮುಖ ದಿನದ ಚಿಂತನವನ್ನು ಮಂಡಿಸಿ ಐಶ್ವರ್ಯ ಸರ್ವರನ್ನು ಸ್ವಾಗತಿಸಿ ಶ್ರೇಯಸ್ ವಂದಿಸಿದರು. ಪ್ರಸ್ತುತಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿ ಇವರು ಹಾಗೂ ರೋ| ಸದಸ್ಯರಾದ ಶ್ರೀಧರ್ರವರು ಮತ್ತು ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here