ವಾರ್ತೆ

ಇಂಗ್ಲೀಷ್ ಭಾಷಾ ಕಾರ್ಯಾಗಾರ

ಮ0ಗಳೂರು ಪ್ರತಿನಿಧಿ ವರದಿ
ಇಂಗ್ಲೀಷ್ ಭಾಷೆಯು ಒಂದು ಸುಂದರ ಭಾಷೆಯಾಗಿದ್ದು, ವಿಶ್ವದ ಪ್ರಮುಖ ಸಂಪರ್ಕ ಭಾಷೆಯಾಗಿ ಗುರುತಿಸಿಕೊಂಡಿದೆ. ಆದುದರಿಂದ ವಿದ್ಯಾರ್ಥಿಗಳೆಲ್ಲರೂ ಇಂಗ್ಲೀಷ್ ಭಾಷೆಯನ್ನು ಸಂವಹನ ಮಾಧ್ಯಮವಾಗಿ ವಿದ್ಯಾರ್ಥಿ ಹಂತದಲ್ಲಿಯೇ ಬಳಸಿಕೊಂಡರೆ ವೃತ್ತಿ ಜೀವನದಲ್ಲಿ ಉನ್ನತ ಯಶಸ್ಸು ಕಾಣಬಹುದು ಎಂದು ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಹೇಳಿದ್ದಾರೆ.
 
 
 
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿನ ಆಂಗ್ಲಭಾಷ ವಿಭಾಗವು ಪದವಿ ವಿದ್ಯಾರ್ಥಿಗಳಿಗಾಗಿ ಅಂತರ್‍ಕಾಲೇಜು ಮಟ್ಟದ ಇಂಗ್ಲೀಷ್ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
 
 
ಕಾಲೇಜು ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ಚಾಲ್ರ್ಸ್ ವಿ. ಫುರ್‍ತಾದೊ, ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜೋಯ್ ಎಲ್ವಿನ್ ಮಾರ್ಟಿಸ್ ಭಾಗವಹಿಸಿದರು. ಇಂಗ್ಲೀಷ್ ಭಾಷೆಯ ಉಚ್ಛಾರಣೆ ಹಾಗೂ ಧ್ವನಿಶಾಸ್ತ್ರದ ಬಗ್ಗೆ ವಿವರವಾದ ಉಪನ್ಯಾಸವನ್ನು ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ವಿವಿಧ ಕಾಲೇಜಿನ ಸುಮಾರು 25 ವಿದ್ಯಾರ್ಥಿಗಳು ಹಾಗೂ ರಥಬೀದಿ ಕಾಲೇಜಿನ 60 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here