ಆಹೋ ರಾತ್ರಿ ಬಡಗುತಿಟ್ಟು ಯಕ್ಷಗಾನ

0
1236

ದೆಹಲಿ ಪ್ರತಿನಿಧಿ ವರದಿ
ಕರ್ನಾಟಕದ ಸುಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಇವರಿಂದ  ಜುಲೈ 16 ಶನಿವಾರ ರಾತ್ರಿ8.30ರಿಂದ ಮರುದಿನ ಬೆಳಿಗ್ಗೆ 6.00ಗಂಟೆಯವರೆಗೆ ರಾಜಧಾನಿಯ ದೆಹಲಿಯಲ್ಲಿ ಪ್ರಪ್ರಥಮ ಬಾರಿಗೆ ಮೇಳದ ಆಟವೊಂದು ಪ್ರದರ್ಶನಗೊಳ್ಳಲಿದೆ. ದೆಹಲಿ ಕರ್ನಾಟಕ ಸಂಘದಲ್ಲಿ ಅಹೋ ರಾತ್ರಿ ‘ಭೀಷ್ಮ ವಿಜಯ’ ಮತ್ತು ‘ನಾಗಶ್ರೀ’ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶನ  ಆಯೋಜಿಸಲಾಗಿದೆ.
 
ಸುಮಾರು ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಈ ನಾಗಶ್ರೀ ಪ್ರಸಂಗವು ಕರ್ನಾಟಕದ ಅದ್ವೀತಿಯ ಭಾಗವತರು ಹಾಗೂ ಕಲಾವಿದರುಆಗಿದ್ದ ದಿ.ಕಾಳಿಂಗ ನಾವಡ ಅವರ ಒಂದು ಅಮೋಘ ರಚನೆಯಾಗಿದೆ. ಸಾಲಿಗ್ರಾಮ ಮೇಳವಷ್ಟೇ ಅಲ್ಲದೆ ಇನ್ನೂ ಹಲವಾರುತಿರುಗಾಟದ ಮೇಳಗಳು ಈ ಪ್ರಸಂಗವನ್ನುಕರ್ನಾಟಕದ ಮೂಲೆ ಮೂಲೆಗಳಲ್ಲಿ ಆಡಿ ತೋರಿಸಿ ಜನಪ್ರಿಯಗೊಳಿಸುತ್ತಿವೆ. ಇದೇ ಮೊದಲ ಬಾರಿಗೆ ಇಂತಹ ಒಂದುತಿರುಗಾಟದ ಮೇಳವು ದೆಹಲಿಯಲ್ಲಿ ಈ ಪ್ರಸಂಗವನ್ನು ಆಡಿ ತೋರಿಸಲಿದೆ.

LEAVE A REPLY

Please enter your comment!
Please enter your name here