ಆಹಾರ ಕಲಬೆರಕೆ ಮಾಹಿತಿ ಕಾರ್ಯಾಗಾರ

0
619

ಉಜಿರೆ ಪ್ರತಿನಿಧಿ ವರದಿ
ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಕಲಬೆರಕೆ ಕಂಡು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಕಲಬೆರಕೆಯಿಂದ ಕೂಡಿರುವ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಆಹಾರದಲ್ಲಿ ಕಲಬೆರಕೆ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿತು.
 
ujire_-karyagara1
ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಹಾಲು, ತುಪ್ಪ, ಎಣ್ಣೆ, ಬೆಲ್ಲ, ಮೆಣಸಿನ ಹುಡಿ, ಅರಸಿನ ಹುಡಿ, ವನಸ್ಪತಿ ಇತ್ಯಾದಿ ವಸ್ತುಗಳಿಗೆ ಸೇರಿಸುವ ಕಲಬೆರಕೆಯ ಬಗ್ಗೆ ಮಾಹಿತಿ ಮತ್ತು ಅದನ್ನು ಪತ್ತೆ ಮಾಡುವ ಸುಲಭದ ಪರೀಕ್ಷೆಗಳನ್ನು ಮಾಡಿ ತೋರಿಸಲಾಯಿತು. ತದನಂತರ ಆ ಪರೀಕ್ಷೆಗಳನ್ನು ಶಾಲಾ ಮಕ್ಕಳಿಂದಲೇ ಮಾಡಿಸಿ ಕಲಬೆರಕೆಯನ್ನು ಪತ್ತೆ ಮಾಡಲು ತರಬೇತಿ ನೀಡಿ, ಮಕ್ಕಳು ಅವರ ಸಹಪಾಠಿಗಳಿಗೆ, ಹೆತ್ತವರಿಗೆ, ಸಂಬಂಧಿಕರಿಗೆ ಹಾಗೂ ನೆರೆ-ಹೊರೆಯವರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ಮಾಡಲಾಯಿತು.
 
 
ಅಂತಿಮ ವಿಜ್ಞಾನ ಪದವಿಯ ರಸಾಯನ ಶಾಸ್ತ್ರ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ ಪಿ. ಪ್ರಸ್ತಾಪಿಸಿ, ಉಪನ್ಯಾಸಕಿ ದಿವ್ಯಾ ಸಂಯೋಜಿಸಿದರು. ಕಾರ್ಯಾಗಾರದಲ್ಲಿ ಉಪನ್ಯಾಸಕಿಯರಾದ ನಂದ ಕುಮಾರಿ ಕೆ.ಪಿ., ಶ್ರೀರಕ್ಷಾ ಮತ್ತು ಗಾನವಿ ಸಹಕರಿಸಿದರು.

LEAVE A REPLY

Please enter your comment!
Please enter your name here