ಆಸ್ಪತ್ರೆಯಲ್ಲಿ ಅಗ್ನಿ ದುರಂತ

0
268

ರಾಷ್ಟ್ರೀಯ ಪ್ರತಿನಿಧಿ ವರದಿ
ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ, ಪರಿಣಾಮ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಸೋಮವಾರ ರಾತ್ರಿ ನಡೆದಿದೆ.
 
ಸೋಮವಾರ ರಾತ್ರಿ ಸುಮಾರು 7.30ಕ್ಕೆ ಎಎಂಆರ್ ಒಡೆತನಕ್ಕೆ ಸೇರಿದ ಎಸ್ ಯುಎಂ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಕೆನ್ನಾಲಿಗೆ ತುರ್ತು ಚಿಕಿತ್ಸಾ ಫಟಕಕ್ಕೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹೆದರಿದ ರೋಗಿಗಳು, ದಾದಿಯರು ಹಾಗೂ ಇನ್ನಿತರೆ ಸಿಬ್ಬಂದಿ ವರ್ಗದವರು ದಿಕ್ಕಾಪಾಗಿ ಓಡಿದ್ದಾರೆ.
 
 
ಸ್ಥಳಕ್ಕಾಗಮಿಸಿರುವ 24ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.ಅಗ್ನಿ ದುರಂತ ನಡೆದ ಸಂದರ್ಭದಲ್ಲಿ 2ನೇ ಮಹಡಿಯಲ್ಲಿ ಸಾಕಷ್ಟು ಹೆಚ್ಚು ರೋಗಿಗಳಿದ್ದರು. ನಡೆಯಲು ಹಾಗೂ ಓಡಲು ಸಾಧ್ಯವಾಗದ ಕೆಲ ರೋಗಿಗಳು, ವೃದ್ಧರು ಅಸಹಾಯಕ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಡಯಾಲಿಸಿಸ್ ವಾರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here