ಆಸ್ತಿಪಾಸ್ತಿ ಮುಟ್ಟುಗೋಲಿಗೆ ಅದೇಶ

0
260

ರಾಷ್ಟ್ರೀಯ ಪ್ರತಿನಿಧಿ ವರದಿ
ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗಿದೆ. ಶಶಿಕಲಾ ಸೇರಿ ಸುಧಾಕರನ್, ಇಳವರಸಿಗೆ 4 ವರ್ಷ ಜೈಲಾಗಿದೆ. ಮೂವರಿಂದಲೂ ಒಟ್ಟಿ 30 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
 
 
ಮೂವರ ಆಭರಣಗಳನ್ನು ಹರಾಜು ಮಾಡಿ ದಂಡ ವಸೂಲಿಗೆ ಆದೇಶ ನೀಡಲಾಗಿದೆ. ಆರ್ ಬಿಐ ಅಥವಾ ಎಸ್ ಬಿಐ ಗೆ ಮಾರಾಟ ಮಾಡಬೇಕು. ಅಥವಾ ಹರಾಜಿನಿಂದ ಮಾರಾಟ ಮಾಡಿ ದಂಡ ವಸೂಲಿ ಮಾಡಬೇಕು. ಜಯಲಲಿತಾ ಸ್ವಂತ ಸಂಪಾದನೆಯ ಚಿನ್ನಾಬರಣ ಹರಾಜಿಲ್ಲ. ಜಯಾ ಗಳಿಸಿದ್ದ 7040 ಗ್ರಾಂ ಬಂಗಾರ ಹರಾಜಿಗೆ ವಿನಾಯ್ತಿ ನೀಡಲಾಗಿದೆ. ದಂಡ ವಸೂಲಿ ನಂತರದ ಚಿನ್ನಾಭರಣ ಸರ್ಕಾರದ ವಶಕ್ಕೆ ನೀಡಬೇಕು. ಕಂಪನಿಗಳ ಆಸ್ತಿಪಾಸ್ತಿ ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
 
 
 
ಮೂರು ಸಾವಿರ ಎಕರೆ ಭೂಮಿ ಮುಟ್ಟುಗೋಲು ಹಾಕಬೇಕು. ಮುಟ್ಟುಗೋಲು ಹಾಕಲು ಸೂಚಿಸಿರುವ ಕಂಪನಿಗಳ ವಿವರಗಳು ಹೀಗಿದೆ: ಲೆಕ್ಸ್ ಪ್ರಾಪರ್ಟಿ ಡೆವಲಪ್ ಮೆಂಟ್ಸ್ ಪ್ರೈವೆಟ್ ಲಿ., ರಾಮರಾಜ್ ಆಗ್ರೋಮಿಲ್ಸ್ ಪ್ರೈವೆಟ್ ಲಿ., ಸಿಗ್ನೋರಾ ಬ್ಯುಸಿನೆಸ್ ಎಂಟರ್ ಪ್ರೈಸಸ್, ರಿವರ್ ವೇ ಆಗ್ರೋ ಪ್ರಾಡಕ್ಟ್ ಪ್ರೈವೆಟ್ ಲಿ., ಇಂಡೋ ದೋಹಾ ಕೆಮಿಕಲ್ಸ್ ಮತ್ತು ಫಾರ್ಮಾಸಿಟಿಕಲ್ ಲಿ.,ಸೇರಿ 5 ಕಂಪನಿಗಳ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶಿಸಿದೆ.

LEAVE A REPLY

Please enter your comment!
Please enter your name here