ಪ್ರಮುಖ ಸುದ್ದಿವಾರ್ತೆವಿದೇಶ

ಆಸೀಸ್ ನಲ್ಲಿ ಜನಾಂಗೀಯ ದಾಳಿ

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಆಸ್ಟ್ರೇಲಿಯಾದಲ್ಲೂ ಜನಾಂಗೀಯ ದಾಳಿ ನಡೆದಿದೆ. ಅಮೆರಿಕದ ದೇಶದ ನಂತರ ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಕ್ಯಾಥೋಲಿಕ್ ಚರ್ಚ್ ಪಾದ್ರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.
 
 
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಚರ್ಚ್ ನಲ್ಲಿ ಭಾರತದ ಕೇರಳ ಮೂಲದ 48 ವರ್ಷದ ಕ್ಯಾಥೋಲಿಕ್ ಪಾದ್ರಿ ರೇವ್ ಟಾಮಿ ಕಲಥೂರ್ ಮ್ಯಾಥ್ಯೂ ಅವರ ಕುತ್ತಿಗೆ ಭಾಗಕ್ಕೆ ದುಷ್ಕರ್ಮಿ ಇರಿದಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಪಾದ್ರಿಗೆ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 
 
ಮೆಲ್ಬೋರ್ನ್ ಚರ್ಚ್ ನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾದ್ರಿ ರೇವ್ ಟಾಮಿ ಕಲಥೂರ್ ಮ್ಯಾಥ್ಯೂ ಸಭಿಕರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಅದಕ್ಕೂ ಮೊದಲೇ ಸುಮಾರು 72 ವರ್ಷದ ವ್ಯಕ್ತಿ ಅವರ ಮೇಲೆ ದಾಳಿ ಮಾಡಿದ್ದಾನೆ.
 
 
ದುಷ್ಕರ್ಮಿಯನ್ನು ಮೆಲ್ಬೋರ್ನ್ ಪೊಲೀಸರು ವಶಕ್ಕೆ ಪಡೆದಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಜೂನ್ 13ರವರೆಗೂ ವ್ಯಕ್ತಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಜೂನ್ 13ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here