ಆಸಕ್ತಿ ಹಾಗೂ ಸಾಮರ್ಥ್ಯದ ಅರಿವಿನಿಂದ ಯಶಸ್ಸು

0
216

ಉಜಿರೆ ಪ್ರತಿನಿಧಿ ವರದಿ
ನಮ್ಮ ಅಂತರಂಗವನ್ನು ಅರಿತುಕೊಂಡು ನಮ್ಮಲ್ಲಿರುವ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಕಂಡುಕೊಂಡು ಕಾರ್ಯೊನ್ಮುಖರಾದಗ ಯಶಸ್ಸನ್ನು ಕಾಣಲು ಸಾಧ್ಯ ಎಂದು ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಹಾಗೂ ನೋಟರಿ ಪ್ರತಾಪಸಿಂಹ ನಾಯಕ್ ಅವರು ಹೇಳಿದರು.
 
 
ಪ್ರತಾಪಸಿಂಹ ನಾಯಕ್ ಅವರು ಇತ್ತೀಚೆಗೆ ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ ಜಗತ್ತನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮನ್ನು ನಾವು ಬದಲಿಸಿಕೊಂಡಾಗ ಜಗತ್ತೇ ಬದಲಾಗುತ್ತದೆ. ಒಡನಾಟಗಳು, ಸೋಲು ಗೆಲುವುಗಳು ಜೀವನಶಿಕ್ಷಣವನ್ನು ನೀಡುತ್ತದೆ. ಇಂದು ಜಗತ್ತು ವಿಪುಲ ಅವಕಾಶಗಳ ಆಗರ. ಕಾಲೇಜು ಜೀವನದ ಅವಕಾಶಗಳನ್ನು ಬಳಸಿ ಅಗತ್ಯ ಕೌಶಲಗಳನ್ನು ತಮ್ಮದಾಗಿಸಿಕೊಂಡು ಯಶಸ್ಸನ್ನು ಪಡೆಯಿರಿ ಎಂದು ಕರೆ ನೀಡಿದರು.
 
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಗಣರಾಜ್ ಹಾಗೂ ಮಹೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅಸ್ರತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮೌಲ್ಯ ಪ್ರಾರ್ಥಿಸಿ, ಅಭಿಜ್ಞಾ ಸ್ವಾಗತಿಸಿ ಕೊನೆಗೆ ಶ್ರೀಹರಿ ಶರ್ಮ ವಂದಿಸಿದರು.

LEAVE A REPLY

Please enter your comment!
Please enter your name here