ಆಳ್ವಾಸ್ ವಿರಾಸತ್: ಸಾಂಸ್ಕೃತಿಕ ಹಬ್ಬದ ಮೊದಲ ದಿನದ ಮೆರುಗು!

0
2936

ಆಳ್ವಾಸ್ ವಿರಾಸತ್ ರಜತ ಮಹೋತ್ಸವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ವಿರಾಸತ್ ರುವಾರಿ ಡಾ. ಎಂ ಮೋಹನ ಆಳ್ವಾ ಪ್ರಾಸ್ತಾವಿಕವಾಗಿ ಮಾತನಾಡಿ, ೫ ಲಕ್ಷ ವೀಕ್ಷಕರಿಂದ ಆರಂಭವಾದ ವಿರಾಸತ್ ಮಹಾವೀರ ಕಾಲೇಜು, ದವಳ ಕಾಲೇಜು, ಸಾವಿರ ಕಂಬ ಬಸದಿ, ಮಿಜಾರು ಶೋಭಾವನ ಹೀಗೆ ವಿಭಿನ್ನ ವೇದಿಕೆಯಲ್ಲಿ ನಡೆಯುತ್ತಿದ್ದ ವಿರಾಸತ್ ಇಗ ವನಜಾಕ್ಷಿ ಶ್ರಿಪತಿ ಭಟ್ ವೇದಿಕೆಯಲ್ಲಿ ನಡೆದುಕೊಂಡು ಬರುತ್ತಿರುವುದು ಸಂತಸದ ವಿಷಯ. ದೇಶ ವಿದೇಶದ ವಿಭಿನ್ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.ವಿರಾಸತ್ ಕೇವಲ ಮನೋರಂಜನೆ ಹಬ್ಬ ಸಂಸ್ಕೃತಿಕ ಹಬ್ಬವಾಗಿ ಮೂಡಿಬರುತ್ತಿದೆ. ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗವನ್ನು ಹುಟ್ಟುಹಾಕಿದ ಹೆಮ್ಮೆ ಈ ವಿರಾಸತ್ ಗೆ ಸಲ್ಲುತ್ತದೆ.ವಿದ್ಯೆಯೊಂದಿಗೆ ಕಲೆಯನ್ನು ಜೋಡನೆ ಮಾಡಿಕೊಂಡು ಬೆಳೆದಾಗ ಮಾತ್ರ ಮುಂದಿನ ಪೀಳಿಗೆಗೆ ಕಲೆಯನ್ನು ಹಂಚಲು ಸಾಧ್ಯ. ಕೇವಲ ವಿದ್ಯೆಯ ಹೆಸರಿನಲ್ಲಿ ನಮ್ಮ ವಿದ್ಯಾರ್ಥಿಗಳು ಬೆಳೆಯದೇ ಅದರೊಂದಿಗೆ ಕಲೆಯನ್ನು ಪ್ರಪಂದಾದ್ಯಂತ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಆಳ್ವಾಸ್ ವಿರಾಸತ್ ಗೆ ಬಂದ ಪೇಜಾವರ ಶ್ರೀಗಳು ಹೇಳಿದ್ದೇನು…?
ವಿದೇಶೀ ಸಂಸ್ಕೃತಿಗೆ ಮಾತಿನ ಚಾಟಿ ಬೀಸಿದ ಯತಿಶ್ರೇಷ್ಠ
ಮೂಡಬಿದಿರೆ: ಹೌದು…ಇವರು ಮಾತಿನ ಚಾಟಿಯೇಟು ಬೀಸಿದ್ದಾರೆ. ವಿದೇಶೀ ಸಂಸ್ಕೃತಿ ಪ್ರಿಯರಿಗೆ ಇದೆಲ್ಲ ಸರಿಯಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಡಿಸೆಂಬರ್ 31ರ ಮೋಜು ಮಸ್ತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅವರು ಹೇಳಿದ್ದೇನು…? ಹೀಗಂದವರು ಯಾರು…ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಜೊತೆಗೆ ಕೇಂದ್ರ ರಾಜ್ಯ ಸರಕಾರ ನಡುವಣ ಭಿನ್ನಾಭಿಪ್ರಾಯಗಳು, ಕಲಹ ದ್ವೇಷಗಳು ಸಮಂಜಸವಲ್ಲ ಎಂಬುದನ್ನು ಮಾರ್ಮಿಕವಾಗಿ ಪರೋಕ್ಷವಾಗಿಯೇ ಹೇಳುವಲ್ಲಿಯೂ ಈ ಯತಿವರ್ಯರು ಯಶಗಳಿಸಿದ್ದಾರೆ. ಅವರೇನು ಹೇಳಿದರೆಂದರೆ…;ಸಂಗೀತದಲ್ಲಿ ತಾಳ,ಲಯ,ಪಕ್ಕವಾದ್ಯಗಳ ನಡುವಣ ಸಂಬಂಧಗಳು ಅನುಬಂಧವಾಗಿದ್ದಲ್ಲಿ ಮಾತ್ರ ಅದು ಸುಮಧುರವಾಗಲು ಸಾಧ್ಯ ಅದೇ ರೀತಿಯಾಗಿ ದೇಶದಲ್ಲಿರುವ ಜನತೆಯೂ ಈ ನಿಟ್ಟಿನಲ್ಲಿ ಪರಸ್ಪರ ಹೊಂದಾಣಿಕೆಯ ಜೀವನ ಸಾಧಿಸುವಂತಾಗಲಿ ಎಂದರು ಹಾರೈಸಿದರು.
ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಮಹಾ ಸ್ವಾಮೀಜಿ ಆಳ್ವಾಸ್ ನುಡಿಸಿರಿಯ ರಜತ ಸಂಭ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಗೀತ ಎಂಬುದು ಜನತೆಯ ಭಾವೈಕ್ಯತೆಯನ್ನು ಬೆಳೆಸುವ ಕಲೆಯಾಗಿದೆ. ರಾಷ್ಟ್ರೀಯ ಜೀವನದಲ್ಲಿ ಪರಸ್ಪರ ಸಾಮರಸ್ಯ ಹೊಂದಾಣಿಕೆ ಇರಬೇಕು. ಜನಾಂಗ ಜನಾಂಗದ ನಡುವೆ, ವರ್ಗ ವರ್ಗದ ನಡುವೆ ಭಿನ್ನಾಭಿಪ್ರಾಯಗಳಿಲ್ಲದೆ ರಾಷ್ಟ್ರೀಯ ಜೀವನ ಹೊಂದಾಣಿಕೆಯಿಂದ, ಸಾಮರಸ್ಯದಿಂದ ಇರುವಂತಾಗಬೇಕು. ಇದಕ್ಕೆ ಸಂಗೀತದಂತಹ ಕಲಾ ಪ್ರಕಾರ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ವಿಕೃತಿಗೆ ಅವಕಾಶವಿಲ್ಲದಿರಲಿ: ಡಿಸಂಬರ್ 31ರಂದು ಇಡೀ ಸಮಾಜದಲ್ಲಿ ವಿಕೃತಿ ತಾಂಡವಾಡುತ್ತಿದೆ ಎಂದು ಪರೋಕ್ಷವಾಗಿ ಶ್ರೀಗಳು ಅಭಿಪ್ರಾಯಿಸಿದರು. ವಿದೇಶೀ ಸಂಸ್ಕೃತಿಗೆ ಪುರಸ್ಕಾರ ನೀಡುವ ಕಾರ್ಯ ದೇಶದಲ್ಲಿ ನಡೆಯುತ್ತಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ ಶ್ರೀಗಳು ವಿಕೃತಿಗಳಿಗೆ ಅವಕಾಶ ನೀಡಬಾರದೆಂದು ಹೇಳಿದರು.
ಇದೊಂದು ಅಚ್ಚರಿ! : ಆಳ್ವಾಸ್ ವಿರಾಸತ್ ಗೆ ಆಗಮಿಸಿದ ತಕ್ಷಣ ನಮಗೆ ಅಚ್ಚರಿ ಉಂಟಾಯಿತು. 50ಸಹಸ್ರಕ್ಕೂ ಅಧಿಕ ಶ್ರೇಷ್ಠ ದಜರ್ೆಯ ಪ್ರೇಕ್ಷಕ ವರ್ಗ ಅತ್ಯಂತ ಗೌರವಪೂರ್ವಕವಾಗಿ ಆಸೀನರಾಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು. ನಮ್ಮ ಕಣ್ಣಮುಂದಿರುವ ಜನಸ್ತೋಮ ಆಶ್ಚರ್ಯ ಮೂಡಿಸುತ್ತದೆ ಎಂದು ಶ್ರೀಗಳು ಉದ್ಗರಿಸಿದರು.
ಇಂತಹ ಅದ್ಭುತ ಜನಸ್ತೋಮವನ್ನು ಒಂದೆಡೆ ಸೇರಿಸಿರುವ ಮೋಹನ ಆಳ್ವರು ಎಲ್ಲ ಜನತೆಯನ್ನು ಕಲೆಯ ಸಮ್ಮೋಹನೆಗೊಳಪಡಿಸಿದ್ದಾರೆಂದು ಪ್ರಶಂಸಿದರು.
ಒಂದೊಮ್ಮೆ ವೈಭವದಿಂದ ದೇಶದಲ್ಲಿ ವಿಜೃಂಭಿಸಿರುವ ಸಂಸ್ಕೃತಿ ಸಾಹಿತ್ಯಕ್ಕೆ ಮೂಡಬಿದಿರೆಯಲ್ಲಿ ಉತ್ತಮ ಪೋಷಣೆ ದೊರಕುತ್ತಿರುವುದು ಹರ್ಷ ತಂದಿದೆ ಎಂದು ಶ್ರೀಗಳು ಪ್ರಶಂಸಿದರು.

ಶನಿವಾರ ಜನ ಜಾಸ್ತಿಯಂತೆ!
ಹೌದು ಶನಿವಾರ ಜನ ಜಾಸ್ತಿಯಂತೆ! ರಜೆ ಬೇರೆ ಅಲ್ವೇ…ಆ ಕಾರಣಕ್ಕೆ ಆಳ್ವಾಸ್ ವಿರಾಸತ್ ಗೆ ಬರೋ ಮಂದಿ ತುಸು ಜಾಸ್ತಿಯೇ ಎಂಬುದು ಸಂಘಟಕರ ಅಭಿಪ್ರಾಯ.
ಆಳ್ವಾಸ್ ವಿರಾಸತ್ ನ ದ್ವಿತೀಯ ದಿನವಾದ ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಮೋಡಿ ಮಾಡಲಿದೆ.
5.45 ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ರಮಾನಂದ ಸಾಲಿಯನ್ ಬೆಳ್ತಂಗಡಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ ಸಿ.ಇ.ಒ ಚಂದ್ರಶೇಖರ ಎಂ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನ ನಡೆಯಲಿದೆ.
ಸಾಯಂಕಾಲ 6-8ರ ತನಕ ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕರಾದ ಮುಂಬೈನ ಸುಖ್ವಿಂದರ್ ಸಿಂಗ್ ಮತ್ತು ಬಳಗದವರಿಂದ ಗಾನ ತರಂಗ ಕಾರ್ಯಕ್ರಮ ನಡೆಯಲಿದೆ.
8.10ರಿಂದ ನೃತ್ಯಾಂತರ್ ಅಕಾಡೆಮಿ ಆಫ್ ಪರ್ ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ ಒಡಿಸ್ಸಿ ನೃತ್ಯ ನಡೆಯಲಿದೆ.
8.45ರಿಂದ ಚೆನ್ನೈ ಶೈಲಸುಧಾ ಅಕಾಡೆಮಿಯ ಕಲಾವಿದರಿಂದ ಕೂಚುಪುಡಿ ನೃತ್ಯ ನಡೆಯಲಿದೆ. 9.35ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದ್ದು ಆಂಧ್ರದ ಬಂಜಾರ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ,ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಹಾಗೂ ಋತು ಸಂಭ್ರಮ ಕಥಕ್ ನೃತ್ಯ ಜನಮನ ರಂಜಿಸಲಿದೆ.

ಕಾಲವನ್ನ ತಡೆಯೋರು ಯಾರು ಇಲ್ಲ!

ಹರಿಹರನ್ ಮತ್ತು ಗುರುಕಿರಣ್ ಜತೆಸೇರಿ ವಿರಾಸತ್ ಸಂಗೀತ ಸಂಯೋಗಕ್ಕೆ ಮತ್ತಷ್ಟು ಮೇರಗು ನೀಡಿದರು.ಕಾಲವನ್ನು ತಡೆಯೋರು ಯಾರು ಇಲ್ಲ.. ಎಂಬ ಹಾಡನ್ನು ಇಬ್ಬರು ಜೋಡಿಯಾಗಿ ಹಾಡಿ ಜನ ಮನ ಸೆಳೆದರು.
ಗುರುಕಿರಣ್:
ಮೊದಲು ಇಂತಹ ಕಾರ್ಯಕ್ರಮಗಳು ರಾಜರ ಆಸ್ಥಾನದಲ್ಲಿ ನಡೆಯುತ್ತಿತ್ತಂತೆ ಇಗ ಆಳ್ವಾಸ್ ..ಬೆದ್ರೆ ಯಲ್ಲಿ ನಡೆಯುತ್ತಿದೆ. ವಿರಾಸತ್ ರೂವಾರಿ ಡಾ.ಎಮ್ ಮೋಹನ್ ಆಳ್ವ ಅವರಿ ನನ್ನ ನಮನ. ಎಂದರು.

LEAVE A REPLY

Please enter your comment!
Please enter your name here